Friday, July 23, 2021
Homeಕ್ರಿಕೆಟ್ಕ್ರೀಡೆ28 ವರ್ಷಗಳ ಬಳಿಕ ಕೋಪಾ ಅಮೆರಿಕಾ ಕಪ್ ಗೆದ್ದ ಮೆಸ್ಸಿ ಪಡೆ

ಇದೀಗ ಬಂದ ಸುದ್ದಿ

28 ವರ್ಷಗಳ ಬಳಿಕ ಕೋಪಾ ಅಮೆರಿಕಾ ಕಪ್ ಗೆದ್ದ ಮೆಸ್ಸಿ ಪಡೆ

ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಬಲಿಷ್ಠ ಬ್ರೆಜಿಲ್ ತಂಡವನ್ನು 1-0ಯಿಂದ ಮಣಿಸಿ ಕೋಪಾ ಅಮೆರಿಕಾ ಟ್ರೋಫಿ ಎತ್ತಿ ಹಿಡಿದಿದೆ. 1993ರ ನಂತರ ಅರ್ಜೆಂಟೀನಾ ಗೆದ್ದ ಪ್ರಮುಖ ಟ್ರೋಫಿ ಇದಾಗಿದೆ.

ಭಾನುವಾರ ಬ್ರೆಜಿಲ್​ನ ರಿಯೋ ಡಿ ಜನೇರಿಯೋದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಗೆದ್ದು ಬೀಗಿದೆ. 22ನೇ ನಿಮಿಷದಲ್ಲಿ ಏಂಜಲ್ ಡಿ ಮರಿಯಾ ಗೋಲು ಬಾರಿಸುವ ಮೂಲಕ ಅರ್ಜಿಂಟೀನಾದ 28 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿದರು.

ಅಂತಾರಾಷ್ಟ್ರೀಯ ಫುಟ್​ಬಾಲ್​ನಲ್ಲಿ ಶ್ರೇಷ್ಠ ಆಟಗಾರ ಎಂದೇ ಕರೆಯಲ್ಪಡುವ ಲಿಯೋನಲ್ ಮೆಸ್ಸಿ ವೃತ್ತಿ ಜೀವನದಲ್ಲಿ ತಮ್ಮ ರಾಷ್ಟ್ರೀಯ ತಂಡಕ್ಕಾಗಿ ಒಂದೇ ಒಂದು ಪ್ರತಿಷ್ಠಿತ ಪ್ರಶಸ್ತಿ ಗೆದ್ದಿಲ್ಲ ಎನ್ನುವ ಅಪವಾದವಿತ್ತು. ಆದರೆ ಆ ಕೊರಗು ಇಂದು ಕೋಪಾ ಅಮೇರಿಕಾ ಕಪ್ ಗೆಲ್ಲುವ ಮೂಲಕ ಅಂತ್ಯಗೊಂಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img