Sunday, August 1, 2021
Homeದೆಹಲಿ"ಮಾನವೀಯ ಅಗತ್ಯತೆಗಳು ವಾಣಿಜ್ಯ ಲಾಭಗಳನ್ನು ಮೀರಿಸುತ್ತವೆ"

ಇದೀಗ ಬಂದ ಸುದ್ದಿ

“ಮಾನವೀಯ ಅಗತ್ಯತೆಗಳು ವಾಣಿಜ್ಯ ಲಾಭಗಳನ್ನು ಮೀರಿಸುತ್ತವೆ”

ನವದೆಹಲಿ: ಹವಾಮಾನ ವೈಪರೀತ್ಯದೊಂದಿಗೆ ಆರ್ಥಿಕ ಚೇತರಿಕೆ ಕಾರ್ಯತಂತ್ರಗಳನ್ನು ಹೊಂದಿಸಲು ಜಿ-20 ರಾಷ್ಟ್ರಗಳಿಗೆ ಸಚಿವೆ ನಿರ್ಮಲಾ ಸೀತಾರಾಮನ್​ ಒತ್ತಾಯಿಸಿದ್ದಾರೆ. ಇಟಾಲಿಯನ್​ ಪ್ರೆಸಿಡೆನ್ಸಿ ಆಯೋಜಿಸಿರುವ ಸಭೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಮಾತಡಿದರು. ಆರೋಗ್ಯ ವ್ಯವಸ್ಥೆ ಹಾಗೂ ಆರ್ಥಿಕತೆಯನ್ನು ಬಲಪಡಿಸಲು ಭಾರತ ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.

ಈ ಅಸಾಮಾನ್ಯ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾನವೀಯ ಅಗತ್ಯತೆಗಳು ವಾಣಿಜ್ಯ ಲಾಭಗಳನ್ನು ಮೀರಿಸುತ್ತವೆ. ಹಾಗಾಗಿ ಕೋವಿನ್​ ವೇದಿಕೆಯನ್ನು ಇತರೆ ರಾಷ್ಟ್ರಗಳಿಗೆ ಉಚಿತವಾಗಿ ಹಂಚಲು ನಮ್ಮ ಸರ್ಕಾರ ನಿರ್ಧಿರಿಸಿದೆ ಎಂದರು.

ಜಿ 20 ಯ ಫ್ರೇಮ್‌ ವರ್ಕಿಂಗ್ ಗ್ರೂಪ್‌ನ ಸಹ-ಅಧ್ಯಕ್ಷರಾಗಿ, ಯುಕೆ ಜೊತೆಗೆ, ಡಿಜಿಟಲೀಕರಣವನ್ನು ಒಂದು ಕಾರ್ಯಸೂಚಿಯೆಂದು ಪರಿಗಣಿಸುತ್ತದೆ. ಇದು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಉತ್ತಮ ಆದಾಯಕ್ಕಾಗಿ ಹೆಚ್ಚಿನ ಕೆಲಸಗಳಲ್ಲಿ ತೊಡಗಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img