Thursday, July 29, 2021
Homeಬೆಂಗಳೂರುಅಂಬಿ ಫೋಟೋ ಹಿಡಿದು ಅಭಿಮಾನಿಗಳ ಪ್ರತಿಭಟನೆ

ಇದೀಗ ಬಂದ ಸುದ್ದಿ

ಅಂಬಿ ಫೋಟೋ ಹಿಡಿದು ಅಭಿಮಾನಿಗಳ ಪ್ರತಿಭಟನೆ

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ವಿರುದ್ಧದ ವಾಕ್ಸಮರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ನಿನ್ನೆಯೇ ವಿರಾಮ ಘೋಷಿಸಿದ್ದರೂ ಸುಮಲತಾ ಅಭಿಮಾನಿಗಳು ಹಾಗೂ ಜೆಡಿಎಸ್​ ಕಾರ್ಯಕರ್ತರು ತಮ್ಮ ನಾಯಕರ ಪರ ಜಿದ್ದಾಜಿದ್ದಿಗೆ ಬಿದ್ದವರಂತೆ ಪ್ರತಿಭಟನೆ ನಡೆಯುತ್ತ ಆಕ್ರೋಶ ಹೊರಹಾಕುತ್ತಲೇ ಇದೆ.

ಸುಮಲತಾ ಪರ ಬ್ಯಾಟಿಂಗ್​ ಬೀಸುತ್ತಾ, ಎಚ್​ಡಿಕೆ ವಿರುದ್ಧ ಮಾತಾನಡಿದ್ದನ್ನು ಖಂಡಿಸಿ ಶನಿವಾರ ಬೆಳಗ್ಗೆ ರಾಕ್​ಲೈನ್​ ವೆಂಕಟೇಶ್​ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದ ಜೆಡಿಎಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇಂದು ಅಂಬಿ ಅಭಿಮಾನಿಗಳು ಎಚ್​ಡಿಕೆ ವಿರುದ್ಧ ಕಂಠೀರವ ಸ್ಟುಡಿಯೋ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಅಂಬರೀಶ್ ಫೋಟೋ ಹಿಡಿದು ಪ್ರತಿಭಟನೆ ನಡೆಸಿದ ಅಭಿಮಾನಿಗಳು ಕುಮಾರಸ್ವಾಮಿ ಮತ್ತು ರವೀಂದ್ರ ಶೀಕಂಠಯ್ಯ ವಿರುದ್ಧ ಧಿಕ್ಕಾರ ಕೂಗಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img