Sunday, August 1, 2021
Homeಜಿಲ್ಲೆಮೈಸೂರುವಂಚನೆ ಪ್ರಕರಣದ ರಹಸ್ಯ ಬಿಚ್ಚಿಟ್ಟ ನಟ ದರ್ಶನ್

ಇದೀಗ ಬಂದ ಸುದ್ದಿ

ವಂಚನೆ ಪ್ರಕರಣದ ರಹಸ್ಯ ಬಿಚ್ಚಿಟ್ಟ ನಟ ದರ್ಶನ್

ಮೈಸೂರು: ನಕಲಿ ದಾಖಲೆ ಸೃಷ್ಠಿಸಿ ನಟ ದರ್ಶನ್ ಅವರ ಹೆಸರಲ್ಲಿ 25 ಕೋಟಿ ರೂ. ಸಾಲ ಪಡೆದು ವಂಚನೆಗೆ ಯತ್ನ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಎಸಿಪಿಗೆ ಕಚೇರಿಗೆ ಆಗಮಿಸಿದ ದರ್ಶನ್ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ಇದೊಂದು ಸಣ್ಣ ವಿಚಾರ, ಬ್ಲಾಕ್ ಮೇಲ್ ಅಲ್ಲ. ನಮ್ಮದೊಂದು ಡಾಕ್ಯುಮೆಂಟ್ ಪೋರ್ಜರಿ ಆಗಿದೆ. ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ನೀವೇ ಎಲ್ಲ ಊಹಾಪೋಹ ಮಾಡಬೇಡಿ. ಪೊಲೀಸರಿಗೆ ತನಿಖೆ ಮಾಡಲಿ. ನಾನೊಂದು ಹೇಳುವುದು, ಅದು ಬೇರೆಯಾಗಿ ತಪ್ಪಾಗುವುದು ಬೇಡ. ನಿರ್ಮಾಪಕ ಉಮಾಪತಿ ನಾವೆಲ್ಲರೂ ಚೆನ್ನಾಗಿದ್ದೇವೆ. ಕಳೆದ ತಿಂಗಳು ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಾಯಿ ಬಿಡಿಸುತ್ತಾರೆ. ನಮಗೆ ಇದೊಂದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇದರ ಹೊರತಾಗಿ ನನಗೇನೂ ಗೊತ್ತಿಲ್ಲ. ತನಿಖೆ ಬಳಿಕ ಸತ್ಯಾಂಶ ಹೊರ ಬರಲಿದೆ ಎಂದು ದರ್ಶನ್ ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img