Friday, July 23, 2021
Homeಕ್ರೈಂ ನ್ಯೂಸ್ನಿಶ್ಚಯವಾಗಿದ್ದ ಮದುವೆ ನಿರಾಕರಿಸಿದ ತಂಗಿಗೆ ಅಣ್ಣನ ಕೊಡಲಿ ಏಟು

ಇದೀಗ ಬಂದ ಸುದ್ದಿ

ನಿಶ್ಚಯವಾಗಿದ್ದ ಮದುವೆ ನಿರಾಕರಿಸಿದ ತಂಗಿಗೆ ಅಣ್ಣನ ಕೊಡಲಿ ಏಟು

ರಾಯಚೂರು : ಜಿಲ್ಲೆಯಲ್ಲಿ ನೆತ್ತರು ಹರಿದಿದೆ. ನಿಶ್ಚಯವಾಗಿದ್ದ ಮದುವೆ ನಿರಾಕರಿಸಿದ ತಂಗಿಯನ್ನು ಅಣ್ಣನೇ ಕೊಡಲಿಯಿಂದ ಕೊಚ್ಚಿ ಕೊಂದಿರುವ ಘಟನೆ ಶನಿವಾರ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮನೆಯವರು ಮದುವೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದರು. ಈ ನಡುವೆ, ಯುವತಿ ಚಂದ್ರಕಲಾ ಹುಡುಗ ಕಪ್ಪಗಿದ್ದಾನೆ ಎನ್ನುವ ಕಾರಣಕ್ಕೆ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಳು. ಇದರಿಂದ ಕುಪಿತಗೊಂಡ ಆಕೆಯ ಅಣ್ಣ ಶ್ಯಾಮಸುಂದರ ಕೊಡಲಿಯಿಂದ ಕೊಚ್ಚಿ ತಂಗಿಯನ್ನು ಕೊಂದಿದ್ದಾನೆ. ಕೊಲೆ ಆರೋಪಿಯನ್ನು ಗಬ್ಬೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img