Sunday, August 1, 2021
Homeಸುದ್ದಿ ಜಾಲಮುರುಡೇಶ್ವರದಲ್ಲಿ ಪ್ರವಾಸಿಗರೊಬ್ಬರು ನೀರು ಪಾಲು

ಇದೀಗ ಬಂದ ಸುದ್ದಿ

ಮುರುಡೇಶ್ವರದಲ್ಲಿ ಪ್ರವಾಸಿಗರೊಬ್ಬರು ನೀರು ಪಾಲು

ಭಟ್ಕಳ: ತಾಲ್ಲೂಕಿನ ಮುರ್ಡೇಶ್ವರಕ್ಕೆ ಪ್ರವಾಸ ಬಂದಿದ್ದ ಶಿವಮೊಗ್ಗ ಜಿಲ್ಲೆಯ ನಾಲ್ವರು ಪ್ರವಾಸಿಗರಲ್ಲಿ, ಇಬ್ಬರು ಸಮುದ್ರದಲ್ಲಿ ಭಾನುವಾರ ನೀರು ಪಾಲಾಗಿದ್ದಾರೆ. ಒಬ್ಬರ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬರಿಗೆ ಹುಡುಕಾಟ ಮುಂದುವರಿದಿದೆ.

ಈಜಲು ಸಮುದ್ರಕ್ಕೆ ಇಳಿದಿದ್ದ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಾಸೂರು ನಿವಾಸಿಗಳಾದ ಮಣಿ ಹಾಗೂ ನಾಗರಾಜ ಅಲೆಗಳಿಗೆ ಸಿಲುಕಿ ಕೊಚ್ಚಿಕೊಂಡು ಹೋದವರು. ಮಣಿಯ ಮೃತದೇಹ ದಡಕ್ಕೆ ತೇಲಿಕೊಂಡು ಬಂದಿದೆ.

ಭಟ್ಕಳದಲ್ಲಿ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಸಮುದ್ರದಲ್ಲಿ ಅಲೆಗಳ ಸೆಳೆತ ಜೋರಾಗಿದೆ. ಸಮುದ್ರ ಪ್ರಕ್ಷುಬ್ಧವಾಗಿರುವ ಕಾರಣ ದೇವಸ್ಥಾನದ ಬಲಭಾಗದಲ್ಲಿ ಸಮುದ್ರಕ್ಕೆ ಪ್ರವಾಸಿಗರು ತೆರಳುವುದನ್ನು ಪ್ರವಾಸೋದ್ಯಮ ಇಲಾಖೆ ನಿಷೇಧಿಸಿದೆ. ಆದರೆ, ಪ್ರವಾಸಿಗರು ದೇವಸ್ಥಾನದ ಎಡಭಾಗದಲ್ಲಿ ಕದ್ದುಮುಚ್ಚಿ ಈಜಲು ಹೋಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img