Friday, July 30, 2021
Homeಸುದ್ದಿ ಜಾಲಹುಟ್ಟುಹಬ್ಬದ ಕೇಕ್ ತಿಂದು 20 ಮಂದಿ ಅಸ್ವಸ್ಥ

ಇದೀಗ ಬಂದ ಸುದ್ದಿ

ಹುಟ್ಟುಹಬ್ಬದ ಕೇಕ್ ತಿಂದು 20 ಮಂದಿ ಅಸ್ವಸ್ಥ

ಅನಂತಪುರಂ(ಆಂಧ್ರಪ್ರದೇಶ) : ಜನಪ್ರತಿನಿಧಿಯೊಬ್ಬರಹುಟ್ಟುಹಬ್ಬದಂದು ಹಂಚಿದ ಕೇಕ್ ತಿಂದು ಸುಮಾರು 20 ಮಂದಿ ಅಸ್ವಸ್ಥರಾಗಿರುವ ಘಟನೆ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಧರ್ಮಾವರಂ ಎಂಬಲ್ಲಿ ನಡೆದಿದೆ.

ಧರ್ಮಾವರಂನ ಮೂರನೇ ವಾರ್ಡ್​ನ ಕೌನ್ಸಿಲರ್ ಆದ ರಮಣ ಎಂಬಾತನ ಹುಟ್ಟುಹಬ್ಬವನ್ನು ಶಾಂತಿನಗರ ಎಂಬಲ್ಲಿ ಆಚರಿಸಲಾಗಿದ್ದು, ಈ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಕೇಕ್ ಹಂಚಲಾಗಿದೆ. ಅದನ್ನು ತಿಂದ ಸುಮಾರು 20 ಮಂದಿ ಅಸ್ವಸ್ಥರಾಗಿದ್ದಾರೆ.

ಕೇಕ್ ತಿಂದ ಒಂದು ಗಂಟೆಯಲ್ಲಿ, ವಾಂತಿ ಶುರುವಾಗಿದ್ದು, ಎಲ್ಲರನ್ನೂ ಧರ್ಮಾವರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥರಲ್ಲಿ ಮಕ್ಕಳು ಮತ್ತು ವೃದ್ಧರೇ ಹೆಚ್ಚಾಗಿರುವುದಾಗಿ ತಿಳಿದು ಬಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img