Friday, July 23, 2021
Homeಜಿಲ್ಲೆಮಂಡ್ಯ"ಯಾರ್​ ರೀ ಅವ್ನು ರಾಕ್​ಲೈನ್ ವೆಂಕಟೇಶ್":ಶಾಸಕ ಸುರೇಶ್ ಗೌಡ ಗರಂ

ಇದೀಗ ಬಂದ ಸುದ್ದಿ

“ಯಾರ್​ ರೀ ಅವ್ನು ರಾಕ್​ಲೈನ್ ವೆಂಕಟೇಶ್”:ಶಾಸಕ ಸುರೇಶ್ ಗೌಡ ಗರಂ

ಮಂಡ್ಯ: ಕೆಆರ್​ಎಸ್​ ಬಿರುಕು ವಿವಾದ ಮತ್ತಷ್ಟು ತಾರಕಕ್ಕೇರಿದೆ. ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಮತ್ತು ಸುಮಲತಾ ನಡುವಿನ ವಾಕ್ಸಮರ ಈಗ ಅವರವರ ಬೆಂಬಲಿಗರ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿದೆ. ಸುಮಲತಾ ಅವರನ್ನು ಬೆಂಬಲಿಸಿ ನಿರ್ಮಾಪಕ ರಾಕ್​ಲೈನ್​ ವೆಂಟಕೇಶ್​ ನೀಡಿರುವ ಹೇಳಿಕೆಗಳನ್ನು ಖಂಡಿಸಿ ಜೆಡಿಎಸ್ ಶಾಸಕರು ಗರಂ ಆಗಿದ್ದಾರೆ.

ಹೌದು, ರಾಕ್​ಲೈನ್​ ವಿರುದ್ಧ ಜೆಡಿಎಸ್​ ಶಾಸಕ ಸುರೇಶ್​ ಗೌಡ ಏಕವಚನದಲ್ಲೇ ಮಾತನಾಡಿದ್ದಾರೆ.​ ಯಾರ್ ರೀ ಅವನು ಯಾವ ರಾಕ್‌ಲೈನ್ ವೆಂಕಟೇಶ್. ಮಂಡ್ಯ ಜಿಲ್ಲೆಗೂ, ಅವನಿಗೂ ಏನ್ ಸಂಬಂಧ ಎಂದು ಹರಿಹಾಯ್ದಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀನ್ ಯಾವ ಊರ ದಾಸಯ್ಯನಯ್ಯ, ಮಂಡ್ಯ ರಾಜಕೀಯಕ್ಕೆ ನೀನ್ ಬರಬೇಡ. ನೀನ್ಯಾರು ಮಂಡ್ಯ ರಾಜಕೀಯದ ಬಗ್ಗೆ ಮಾತಾಡೋಕೆ. ಬಾಯಿಗೆ ಬಂದಂತೆ ಮಾತಾಡೋದು ಸರಿಯಲ್ಲ. ಹುಷಾರಾಗಿ ಮಾತಾಡು ಎಂದು ಎಚ್ಚರಿಕೆ ರವಾನಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img