Friday, July 30, 2021
Homeಸುದ್ದಿ ಜಾಲನಿಲ್ಲದ ತೈಲ ದರ ಏರಿಕೆ:ಎಷ್ಟೆಷ್ಟಿದೆ ಪೆಟ್ರೋಲ್​-ಡೀಸೆಲ್ ಬೆಲೆ?

ಇದೀಗ ಬಂದ ಸುದ್ದಿ

ನಿಲ್ಲದ ತೈಲ ದರ ಏರಿಕೆ:ಎಷ್ಟೆಷ್ಟಿದೆ ಪೆಟ್ರೋಲ್​-ಡೀಸೆಲ್ ಬೆಲೆ?

ನವದೆಹಲಿ: ಸದ್ಯಕ್ಕೆ ತೈಲ ದರ ಏರಿಕೆ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಇಂದು ಪ್ರತಿ ಲೀಟರ್​ ಪೆಟ್ರೋಲ್​ಗೆ 34 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್​ ದರ 28 ಪೈಸೆ ಏರಿಕೆಯಾಗಿದೆ. ಮುಂಬೈನಲ್ಲಿ ಲೀಟರ್​​ ಪೆಟ್ರೋಲ್​ಗೆ 38 ಪೈಸೆ ಹೆಚ್ಚಳವಾಗಿದ್ದು, 106 ರೂಪಾಯಿಯಾಗಿದೆ. ಡೀಸೆಲ್​ ದರ 32 ಪೈಸೆ ಹೆಚ್ಚಳವಾಗಿದ್ದು, ಪ್ರತಿ ಲೀಟರ್​ಗೆ 97.5 ರಷ್ಟಾಯಿತು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್​ ದರ 39 ಪೈಸೆ ಹೆಚ್ಚಳವಾಗಿದ್ದು, ಸದ್ಯ 100.95 ರೂಪಾಯಿಯಾಗಿದೆ. ಡೀಸೆಲ್ ಬೆಲೆ 32 ಪೈಸೆ ಹೆಚ್ಚಳವಾಗುವ ಮೂಲಕ ಇಂದು 89.92 ರೂಪಾಯಿಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್ ದರ 103.93 ರೂಪಾಯಿಯಷ್ಟಿದ್ದು, ಡೀಸೆಲ್ ದರ 95.26 ರೂಪಾಯಿಯಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ 18 ದಿನಗಳ ಕಾಲ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ದರ ಪರಿಷ್ಕರಣೆ ನಿಲ್ಲಿಸಿದ್ದವು. ಬಳಿಕ ನಿರಂತರವಾಗಿ ತೈಲ ದರ ಏರಿಕೆಯಾಗುತ್ತಲೇ ಇದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img