Sunday, August 1, 2021
Homeಸುದ್ದಿ ಜಾಲಮೆಕ್ಸಿಕೊದಲ್ಲಿ ಕೋವಿಡ್‌-19 ಮೂರನೇ ಅಲೆ ಆರಂಭ

ಇದೀಗ ಬಂದ ಸುದ್ದಿ

ಮೆಕ್ಸಿಕೊದಲ್ಲಿ ಕೋವಿಡ್‌-19 ಮೂರನೇ ಅಲೆ ಆರಂಭ

ಮೆಕ್ಸಿಕೊ ನಗರ: ಮೆಕ್ಸಿಕೊದಲ್ಲಿ ಕೋವಿಡ್‌-19 ಮೂರನೇ ಅಲೆ ಆರಂಭವಾಗಿದ್ದು, ಕಳೆದ ವಾರಕ್ಕಿಂತ ಸೋಂಕು ಪ್ರಮಾಣ ಶೇಕಡ 29ರಷ್ಟು ಹೆಚ್ಚಾಗಿದೆ.

‘ಈ ಬಾರಿ ಯುವಕರಲ್ಲಿ ಸೋಂಕು ಹೆಚ್ಚಾಗಿ ಕಾಣಿಸುತ್ತಿದೆ. ಈ ಹಿಂದಿನ ಅಲೆಯು ಸೆಪ್ಟೆಂಬರ್‌ನಲ್ಲಿ ಆರಂಭವಾಗಿತ್ತು. ಆಗ ಸೋಂಕು ಎಷ್ಟು ಪ್ರಮಾಣದಲ್ಲಿ ಇತ್ತೋ, ಅಷ್ಟೇ ಪ್ರಮಾಣದಲ್ಲಿ ಈಗ ಸೋಂಕು ಹರಡುತ್ತಿದೆ. ಕಳೆದ ಬಾರಿ ಜನವರಿಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಜೂನ್‌ ವೇಳೆಗೆ ಕಡಿಮೆಯಾಗಿತ್ತು’ ಎಂದು ಮೆಕ್ಸಿಕೊದ ಆರೋಗ್ಯ ಇಲಾಖೆ ತಿಳಿಸಿದೆ.

ಆದರೆ ಈ ಬಾರಿ ಆಸ್ಪತ್ರೆಗಳಲ್ಲಿ ಶೇಕಡ 22ರಷ್ಟು ಹಾಸಿಗೆಗಳು ಮಾತ್ರ ಭರ್ತಿಯಾಗಿವೆ. ಈ ಹಿಂದಿನ ಅಲೆಯಲ್ಲಿ ದೇಶದ ಹಲವು ಭಾಗಗಳಲ್ಲಿ ಹಾಸಿಗೆಗಳು ಸಂಪೂರ್ಣ ಭರ್ತಿಯಾಗಿದ್ದವು.

‘ಲಸಿಕೆ ಅಭಿಯಾನದಿಂದಾಗಿ ಹಿರಿಯ ನಾಗರಿಕರಲ್ಲಿ ಸೋಂಕು ಗಂಭೀರ ಸ್ವರೂಪದಲ್ಲಿ ಕಾಣಿಸಿಕೊಂಡಿಲ್ಲ. ಮೆಕ್ಸಿಕೊದಲ್ಲಿ ಶುಕ್ರವಾರದ ವೇಳೆಗೆ ಶೇಕಡ 39ರಷ್ಟು ವಯಸ್ಕರಿಗೆ ಲಸಿಕೆ ನೀಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img