Friday, July 30, 2021
Homeಸುದ್ದಿ ಜಾಲಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್​ಗೆ ಪೊಲೀಸ್​ ಶಾಕ್

ಇದೀಗ ಬಂದ ಸುದ್ದಿ

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್​ಗೆ ಪೊಲೀಸ್​ ಶಾಕ್

ಬೆಂಗಳೂರು: ಬೆಳ್ಳಂಬೆಳಗ್ಗೆ ನಗರದಲ್ಲಿ ಪೊಲೀಸರು ರೌಡಿಶೀಟರ್ಸ್​ ಮನೆ ಮೇಲೆ ದಾಳಿ ಮಾಡಿದ್ದಾರೆ. ಸುಮಾರು ಬೆಳಗ್ಗೆ 5ಕ್ಕೆ ಆರಂಭಗೊಂಡಿರುವ ಈ ದಾಳಿಯಲ್ಲಿ ಈವರೆಗೆ ಉತ್ತರ ವಿಭಾಗದ 292 ರೌಡಿಗಳು ಹಾಗೂ ಸಹಚರರ ಮನೆಗಳನ್ನು ಪರಿಶೀಲಿಸಲಾಗಿದೆ. ಈಗಾಗಲೇ ಪೊಲೀಸರು ಸುಮಾರು 150ಕ್ಕೂ ಹೆಚ್ಚು ರೌಡಿಶೀಟರ್ಸ್​ನ್ನು ವಶಕ್ಕೆ ಪಡೆದಿದ್ದಾರೆ.

ಇಂದು ಬೆಳಗ್ಗೆಯೇ ರೌಡಿಶೀಟರ್ಸ್​ಗೆ ಶಾಕ್ ನೀಡಿರುವ ಪೊಲೀಸರು ನಗರದಾದ್ಯಂತ ರೌಡಿ ಆಸಾಮಿಗಳ ಮನೆಗಳಲ್ಲಿ ಪರಿಶೀಲನೆ ಕೈಗೊಂಡಿದ್ದಾರೆ. ನಗರದ 8 ವಲಯಗಳಲ್ಲಿ ಪೊಲೀಸರು ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ ಸಾವಿರಕ್ಕೂ ಅಧಿಕ ರೌಡಿಶೀಟರ್ಸ್ ಮನೆಗಳನ್ನು ಪರಿಶೀಲನೆ ಕೈಗೊಂಡಿದ್ದಾರೆ.

ಲಾಕ್​ಡೌನ್ ತೆರವುಗೊಂಡ ಬಳಿಕ ನಗರದಲ್ಲಿ ರೌಡಿಸಂ ಚಟುವಟಿಕೆಗಳು ಹೆಚ್ಚಾಗಿದ್ದವು. ಹಣಕಾಸು ವ್ಯವಹಾರ, ವೈಯಕ್ತಿಕ ದ್ವೇಷ ಸೇರಿದಂತೆ ಇತ್ಯಾದಿ ಕಾರಣಗಳಿಂದ ಕೊಲೆ ಪ್ರಕರಣಗಳು ದಾಖಲಾಗಿದ್ದವು. ಜೈಲಿನಿಂದಲೇ ಕುಳಿತು ರೌಡಿಸಂ ನಿಯಂತ್ರಣದ ಬಗ್ಗೆಯೂ ಪೊಲೀಸರು ಕೈಗೊಂಡಿದ್ದ ತನಿಖೆ ವೇಳೆ ಬಯಲಾಗಿತ್ತು. ಹೀಗಾಗಿ ಈ ಹಿಂದೆ ಹೆಚ್ಚುವರಿ ಆಯುಕ್ತರು, ಡಿಸಿಪಿಗಳೊಂದಿಗೆ ಕಮಿಷನರ್ ಕಮಲ್ ಪಂತ್ ಸಭೆ ನಡೆಸಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಸೂಚಿಸಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img