Friday, July 30, 2021
Homeದೆಹಲಿಜುಲೈ 14ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ಇದೀಗ ಬಂದ ಸುದ್ದಿ

ಜುಲೈ 14ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ನವದೆಹಲಿ : ಕೇಂದ್ರ ಸಚಿವ ಸಂಪುಟ ಪುನಾರಚನೆ ಬೆನ್ನಲ್ಲೇ ಜುಲೈ 14ರಂದು ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಚಿವರ ಪರಿಷತ್ತಿನ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿ ಮಂತ್ರಿ ಮಂಡಳಿಯೊಡನೆ ನಡೆಸಲಿರುವ ಎರಡನೇ ಸಭೆ ಇದಾಗಿದೆ.

ಕೇಂದ್ರ ಸಚಿವ ಸಂಪುಟ ಪುನಾರಚನೆಯ ಒಂದು ದಿನದ ನಂತರ ಪ್ರಧಾನಿ ಕೇಂದ್ರ ಸಚಿವ ಸಂಪುಟ ಮತ್ತು ಸಚಿವರ ಪರಿಷತ್ತಿನೊಂದಿಗೆ ಸಭೆ ನಡೆಸಿದ್ದರು. ಈಗ ಮತ್ತೊಮ್ಮೆ ಸಚಿವರ ಮಂತ್ರಿ ಪರಿಷತ್‌ನ ಸಭೆ ಬುಧವಾರ ನಡೆಸಲಾಗುತ್ತದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಗುರುವಾರ ಸಭೆಯೊಂದು ನಡೆದಿದ್ದು, ಕೋವಿಡ್​​ ವಿರುದ್ಧದ ಹೋರಾಟದಲ್ಲಿ ಯಾವುದೇ ಅಜಾಗರೂಕತೆ ತೋರಬಾರದು ಎಂದು ಪ್ರಧಾನಿಮಂತ್ರಿಗಳು ನೂತನ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img