Sunday, August 1, 2021
Homeಸುದ್ದಿ ಜಾಲಮಲೆ ಮಹದೇಶ್ವರ ಭಕ್ತರ ವಾಸ್ತವ್ಯಕ್ಕೆ ತೆರೆದ ಲಾಡ್ಜ್‌ಗಳು..?

ಇದೀಗ ಬಂದ ಸುದ್ದಿ

ಮಲೆ ಮಹದೇಶ್ವರ ಭಕ್ತರ ವಾಸ್ತವ್ಯಕ್ಕೆ ತೆರೆದ ಲಾಡ್ಜ್‌ಗಳು..?

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಪವಿತ್ರ ತಾಣ ಮಲೆಮಹದೇಶ್ವರ ಬೆಟ್ಟದಲ್ಲಿ ಕೋವಿಡ್ ನಿಯಮದಂತೆ ಲಾಡ್ಜ್‌ಗಳಲ್ಲಿ ಭಕ್ತರ ವಾಸ್ತವ್ಯಕ್ಕೆ ಅವಕಾಶ ನೀಡದಂತೆ ಸೂಚನೆಯಿದ್ದರೂ, ಅದನ್ನು ಗಾಳಿಗೆ ತೂರಿ ಕೆಲವು ಖಾಸಗಿ ಲಾಡ್ಜ್‌ಗಳು ಭಕ್ತರ ವಾಸ್ತವ್ಯಕ್ಕೆ ಮುಕ್ತ ಅವಕಾಶ ನೀಡಿವೆ ಎಂಬ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಪೊಲೀಸರು ನೋಟಿಸ್ ನೀಡಿದ್ದಾರೆ.

ಗ್ರಾಮ ಪಂಚಾಯತಿ ಕಚೇರಿ ಬಳಿಯಿರುವ ಹಲವು ಲಾಡ್ಜ್‌ಗಳಲ್ಲಿ ಭಕ್ತರು ಕಿಕ್ಕಿರಿದು ಕಾಣಿಸಿಕೊಂಡಿದ್ದು, ಲಾಡ್ಜ್‌ಗಳಲ್ಲಿ ತಂಗಲು ವ್ಯವಸ್ಥೆ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಲಾಕ್‌ಡೌನ್ ತೆರವುಗೊಳ್ಳುತ್ತಿದ್ದಂತೆಯೇ ಬೆಟ್ಟಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಹೀಗೆ ಬರುವ ಪ್ರವಾಸಿಗರು ಸಂಜೆ ವೇಳೆಗೆ ಬೆಟ್ಟದಿಂದ ಹಿಂತಿರುಗಬೇಕೆಂಬ ನಿಯಮವಿದ್ದರೂ, ಅದನ್ನು ಉಲ್ಲಂಘಿಸಿ ಲಾಡ್ಜ್‌ಗಳು ಅವಕಾಶ ಮಾಡಿಕೊಟ್ಟಿರುವುದು ಕಂಡುಬಂದಿದೆ.

‘ಆದ್ದರಿಂದ ನಿಮಗೆ ಸಂಬಂಧಿಸಿದ ಲಾಡ್ಜ್ ಮತ್ತು ವಸತಿ ಗೃಹವನ್ನು ಭಕ್ತಾಧಿಗಳಿಗೆ ಯಾವುದೇ ಕಾರಣಕ್ಕೂ ನೀಡಬಾರದು. ಅಕ್ರಮವಾಗಿ ನೀಡಿದ್ದು ಕಂಡುಬಂದಲ್ಲಿ ನಿಮ್ಮ ಮೇಲೆ ಡಿಎಂ ಆಯಕ್ಟ್ 2021 ರೀತ್ಯಾ ಪ್ರಕರಣ ದಾಖಲಿಸುವುದಾಗಿ’ ಲಾಡ್ಜ್‌ಗಳ ಮಾಲೀಕರುಗಳಿಗೆ ಪೊಲೀಸ್ ಇನ್ಸ್‌ಪೆಕ್ಟರ್ ಸಹಿ ಮತ್ತು ಮೊಹರುಳ್ಳ ನೋಟಿಸ್ ನೀಡಲಾಗಿದೆ.

ಇನ್ನು ಪ್ರಾಧಿಕಾರಕ್ಕೆ ಸೇರಿದ ವಸತಿ ಗೃಹಗಳಿದ್ದು, ಇಲ್ಲಿ ಕಟ್ಟುನಿಟ್ಟಾಗಿ ಭಕ್ತರ ವಾಸ್ತವ್ಯಕ್ಕೆ ನಿಷೇಧ ಹೇರಲಾಗಿದೆ. ಆದರೆ ಇದುವರೆಗೆ ಲಾಕ್‌ಡೌನ್ ಇದ್ದ ಕಾರಣ ಗ್ರಾಹಕರಿಲ್ಲದೆ ನಷ್ಟ ಅನುಭವಿಸಿದ ಖಾಸಗಿ ಲಾಡ್ಜ್‌ಗಳು ಇದೀಗ ನಿಯಮ ಗಾಳಿಗೆ ತೂರುತ್ತಿರುವುದು ಎದ್ದು ಕಾಣುತ್ತಿದೆ. ಇದರಿಂದ ಸೋಂಕು ಹೆಚ್ಚುವ ಭಯವೂ ಸ್ಥಳೀಯರನ್ನು ಕಾಡುತ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img