Friday, July 23, 2021
Homeಜಿಲ್ಲೆಶಿವಮೊಗ್ಗಶಿವಮೊಗ್ಗದ ಕಟ್ಟಡ ಕಾರ್ಮಿಕರಿಗೆ ಸಚಿವ ಈಶ್ವರಪ್ಪ ನೆರವು

ಇದೀಗ ಬಂದ ಸುದ್ದಿ

ಶಿವಮೊಗ್ಗದ ಕಟ್ಟಡ ಕಾರ್ಮಿಕರಿಗೆ ಸಚಿವ ಈಶ್ವರಪ್ಪ ನೆರವು

ಶಿವಮೊಗ್ಗ : ಕೋವಿಡ್ ಲಾಕ್​ಡೌನ್​ನಿಂದ ಅರ್ಥಿಕವಾಗಿ ಸಂಕಷ್ಟಕ್ಕೊಳಗಾದ ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ ರೂ. ನೆರವು ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ. ಇಂದು ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 1,07,286 ಕಾರ್ಮಿಕ ಫಲಾನುಭವಿಗಳ ಖಾತೆಗೆ ನೇರವಾಗಿ ನಗದು ವರ್ಗಾವಣೆ ಮಾಡಲಾಗುತ್ತಿದೆ ಎಂದಿದ್ದಾರೆ.

ಯಾರ ಖಾತೆಗೆ ಹಣ ಜಮಾವಣೆ ಆಗಿಲ್ಲವೂ ಅವರು ಬ್ಯಾಂಕ್‌ಗೆ ಹೋಗಿ ಆಧಾರ್ ಲಿಂಕ್ ಮಾಡಬೇಕು. ಜಿಲ್ಲೆಯಲ್ಲಿ ಈಗಾಗಲೇ 72,065 ಕಾರ್ಮಿಕರ ಖಾತೆಗೆ ಒಟ್ಟು 21.61 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ಇದರಲ್ಲಿ 11,040 ಕಾರ್ಮಿಕರಿಗೆ ಜಮೆಗೊಳಿಸಲಾದ ಮೊತ್ತ ಅವರ ಖಾತೆಗಳು ನಿಷ್ಕ್ರೀಯವಾಗಿರುವುದರಿಂದ ಹಾಗೂ ಬ್ಯಾಂಕ್ ಖಾತೆ ಆಧಾರ್​​​ ಲಿಂಕ್ ಮಾಡಿಸದೆ ಇರುವುದರಿಂದ 3.31 ಕೋಟಿ ರೂ. ಇನ್ನೂ ಜಮೆ ಆಗಿಲ್ಲ ಎಂದು ಮಾಹಿತಿ ನೀಡಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img