Friday, July 23, 2021
Homeಸುದ್ದಿ ಜಾಲತಮಿಳುನಾಡಿನಲ್ಲಿ ಜುಲೈ 19ರವರೆಗೆ ಲಾಕ್​ಡೌನ್

ಇದೀಗ ಬಂದ ಸುದ್ದಿ

ತಮಿಳುನಾಡಿನಲ್ಲಿ ಜುಲೈ 19ರವರೆಗೆ ಲಾಕ್​ಡೌನ್

ಚೆನ್ನೈ: ಕರೊನಾ ಎರಡನೇ ಅಲೆ ತಗ್ಗಿದ್ದು, ಮೂರನೇ ಅಲೆಯ ಭಯವಿರುವಾಗಲೇ ಬಹುತೇಕ ರಾಜ್ಯಗಳು ಅನ್​ಲಾಕ್​ ಪ್ರಕ್ರಿಯೆ ಆರಂಭಿಸಿವೆ. ಆದರೆ ನೆರೆಯ ತಮಿಳುನಾಡಿನಲ್ಲಿ ಲಾಕ್​ಡೌನ್​ ಅನ್ನು ವಿಸ್ತರಣೆ ಮಾಡಿ ಘೋಷಿಸಲಾಗಿದೆ. ಜುಲೈ 19ರವರೆಗೆ ಲಾಕ್​ಡೌನ್ ಮುಂದುವರಿಯಲಿದೆ.

ಲಾಕ್​ಡೌನ್ ವಿಸ್ತರಣೆ ಜತೆ ಒಂದಿಷ್ಟು ಕ್ಷೇತ್ರಗಳಲ್ಲಿ ಸಡಿಲಿಕೆಯನ್ನೂ ನೀಡಲಾಗಿದೆ. ಎಲ್ಲ ಅಂಗಡಿಗಳಿಗೆ ರಾತ್ರಿ 9 ಗಂಟೆಯವರೆಗೆ ಬಾಗಿಲು ತೆರೆಯಲು ಅನುಮತಿ ನೀಡಲಾಗಿದೆ. ರೆಸ್ಟೋರೆಂಟ್, ಟೀ ಶಾಪ್​ಗಳು, ಬೇಕರಿಗಳು, ರಸ್ತೆ ಬದಿ ತಿಂಡಿ ಮಾರಾಟ ಮಾಡುವವರು ಹಾಗೂ ಸ್ವೀಟ್ ಅಂಗಡಿಗಳಿಗೆ ರಾತ್ರಿ 9 ಗಂಟೆಯವರೆಗೆ ಶೇ. 50 ಗ್ರಾಹಕರೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶವಿದೆ. ಮದುವೆಗಳಿಗೆ 50 ಜನ ಹಾಗೂ ಅಂತ್ಯಸಂಸ್ಕಾರಕ್ಕೆ 20 ಜನರಿಗೆ ಸೇರಲು ಅವಕಾಶವಿದೆ.

ಶಾಲೆ, ಕಾಲೇಜು, ಬಾರ್​ಗಳು, ಸಿನಿಮಾ ಮಂದಿರಗಳು, ಸ್ವಿಮ್ಮಿಂಗ್ ಪೂಲ್​ಗಳು, ಜೂಗಳು ಬಾಗಿಲು ಮುಚ್ಚಿರಲಿವೆ. ಯಾವುದೇ ರೀತಿಯ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಸದ್ಯಕ್ಕೆ ರಾಜ್ಯದಿಂದ ರಾಜ್ಯಕ್ಕೆ ಬಸ್​ ಸಂಚಾರವಿಲ್ಲವಾದರೂ, ಹತ್ತಿರದ ಪುದುಚೆರಿಗೆ ಬಸ್ ಸಂಚಾರ ಆರಂಭಿಸಲು ಅನುಮತಿ ನೀಡಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img