Friday, July 23, 2021
Homeಸುದ್ದಿ ಜಾಲಭಾರತ-ಶ್ರೀಲಂಕಾ ಸರಣಿ ಮುಂದೂಡಿಕೆ

ಇದೀಗ ಬಂದ ಸುದ್ದಿ

ಭಾರತ-ಶ್ರೀಲಂಕಾ ಸರಣಿ ಮುಂದೂಡಿಕೆ

ಕೊಲಂಬೊ: ಶ್ರೀಲಂಕಾ ಕ್ರಿಕೆಟ್‌ ತಂಡದಲ್ಲಿ ಮತ್ತೂಂದು ಕೋವಿಡ್ ಪ್ರಕರಣ ಕಂಡು ಬಂದಿದೆ. ತಂಡದ ಅಂಕಿಸಂಖ್ಯೆ ವಿಶ್ಲೇಷಕ ಜಿ.ಟಿ. ನಿರೋಶನ್‌ ಅವರಿಗೆ ಕೊರೊನಾ ತಗುಲಿರುವುದಾಗಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಶುಕ್ರವಾರ ತಿಳಿಸಿದೆ. ಇದರ ಪರಿಣಾಮ ಭಾರತ-ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿ ಮುಂದೂಡಿಕೆಯಾಗಿದೆ.

ಜುಲೈ 13ಕ್ಕೆ ಆರಂಭವಾಗಬೇಕಿದ್ದ ಮೊದಲ ಏಕದಿನ ಪಂದ್ಯ ಜುಲೈ 17ರಂದು ನಡೆಯಲಿದೆ. ಗುರುವಾರ ಲಂಕಾ ತಂಡದ ಬ್ಯಾಟಿಂಗ್‌ ಕೋಚ್‌, ಜಿಂಬಾಬ್ವೆಯ ಗ್ರ್ಯಾಂಟ್‌ ಫ್ಲವರ್‌ ಅವರಿಗೆ ಸೋಂಕು ದೃಢ ಪಟ್ಟಿತ್ತು. ತಂಡ ಇಂಗ್ಲೆಂಡ್‌ನಿಂದ ಆಗಮಿಸಿದ ಬಳಿಕ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಅದರ ಬೆನ್ನಲ್ಲೇ ಈ ಪ್ರಕರಣ ನಡೆದಿರುವುದು ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img