Thursday, July 29, 2021
Homeಸಿನಿಮಾಮದರ್ ಡೈರಿಯ ಹಾಲಿನ ಬೆಲೆ ಹೆಚ್ಚಳ

ಇದೀಗ ಬಂದ ಸುದ್ದಿ

ಮದರ್ ಡೈರಿಯ ಹಾಲಿನ ಬೆಲೆ ಹೆಚ್ಚಳ

ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದ ತತ್ತರಿಸುತ್ತಿರುವ ಸಾಮಾನ್ಯ ಜನರಿಗೆ ಮತ್ತೆ ಅಘಾತವೊಂಟು ಮಾಡುವ ಸುದ್ದಿ ಸಿಕ್ಕಿದೆ. ಡೈರಿ ಬ್ರಾಂಡ್, ಅಮುಲ್ ನಂತ್ರ ಈಗ ಮದರ್ ಡೈರಿ ಹಾಲಿನ ಬೆಲೆಯನ್ನ ಕೂಡ ಹೆಚ್ಚಿಸಿದೆ.

ದೆಹಲಿ-ಎನ್‌ಸಿಆರ್‌ನಲ್ಲಿ ಮದರ್ ಡೈರಿ ಹಾಲಿನ ಬೆಲೆಯನ್ನ ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಿಸಿದೆ. ಹೊಸ ಬೆಲೆಗಳು ನಾಳೆಯಿಂದ ಅಂದ್ರೆ, ಜುಲೈ 11, 2021 ರಿಂದ ಅನ್ವಯವಾಗುತ್ತವೆ. ಅಂದ್ಹಾಗೆ, ಈ ಹಿಂದೆ ಜುಲೈ 1 ರಿಂದ ಅಮುಲ್ ತನ್ನ ಹಾಲಿನ ಬೆಲೆಯನ್ನ ಲೀಟರ್‌ಗೆ 2 ರೂ.ಗೆ ಹೆಚ್ಚಿಸಿತ್ತು.

2021ರ ಜುಲೈ 11 ರಿಂದ ಜಾರಿಗೆ ಬರುವಂತೆ ದೆಹಲಿ-ಎನ್‌ಸಿಆರ್‌ನಲ್ಲಿ ತನ್ನ ಹಾಲಿನ ಬೆಲೆಯನ್ನ ಲೀಟರ್‌ಗೆ 2 ರೂ.ಗೆ ಹೆಚ್ಚಿಸಲು ಒತ್ತಾಯಿಸಲಾಗಿದೆ ಎಂದು ಮದರ್ ಡೈರಿ ಹೇಳಿದೆ. ಎಲ್ಲಾ ಹಾಲಿನ ರೂಪಾಂತರಗಳಿಗೆ ಹೊಸ ಬೆಲೆಗಳು ಅನ್ವಯವಾಗುತ್ತವೆ. ಈ ಡೈರಿ ಕಂಪನಿಯು ಕೊನೆಯದಾಗಿ 2019ರ ಡಿಸೆಂಬರ್‌ನಲ್ಲಿ ಹಾಲಿನ ಬೆಲೆಯನ್ನ ಹೆಚ್ಚಿಸಿತ್ತು. ಈಗ ನಾಳೆಯಿಂದ ಗ್ರಾಹಕರಿಗೆ ಹೊಸ ಬೆಲೆಗೆ ಮದರ್ ಡೈರಿ ಹಾಲು ಸಿಗುತ್ತದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img