Sunday, August 1, 2021
Homeಬೆಂಗಳೂರುವಿವಾದಕ್ಕೆ ಅವರೇ ಅಂತ್ಯವಾಡಿದ್ರೆ ನಂಗೆ ಸಂತೋಷ : ಸುಮಲತಾ

ಇದೀಗ ಬಂದ ಸುದ್ದಿ

ವಿವಾದಕ್ಕೆ ಅವರೇ ಅಂತ್ಯವಾಡಿದ್ರೆ ನಂಗೆ ಸಂತೋಷ : ಸುಮಲತಾ

ಬೆಂಗಳೂರು : ಕಳೆದ ಕೆಲವು ದಿನಗಳಿಂದ ಮಂಡ್ಯ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಇಬ್ಬರ ನಡುವೆ ಕೆಆರ್‌ಎಸ್ ಡ್ಯಾಮ್ ವಿಚಾರವಾಗಿ ಶುರುವಾಗಿದ್ದ ಮಾತಿನ ಗುದ್ದಾಟ, ಅಂಬರೀಶ್ ಸಮಾಧಿ, ಚಿತ್ರರಂಗ ಅಂತೆಲ್ಲಾ ತಿರುವು ತೆಗೆದುಕೊಂಡಿದೆ. ಇಂದು ಜೆಪಿನಗರದ ನಿವಾಸದ ಬಳಿ ಮಾತನಾಡಿದ ಸಂಸದೆ ಸುಮಲತಾ, ವಿಷಯವನ್ನು ಆರಂಭಿಸಿದ್ದೇ ಅವರು, ಅವರೇ ಅಂತ್ಯ ಮಾಡ್ತೀನಿ ಅಂದ್ರೆ ಸಂತೋಷ. ನಾನು ಯಾವತ್ತೂ ವಿವಾದ ಮಾಡಬೇಕು ಅಥವಾ ವಿವಾದವನ್ನು ವೈಯಕ್ತಿಕವಾಗಿ ತಿರುಗಿಸಬೇಕು ಅಂತಾ ಮಾತನಾಡಿರಲಿಲ್ಲ.

ನಾನು ನನ್ನ ದಿಶಾ ಸಭೆಯಲ್ಲಿ ಮಾತನಾಡಿರೋದನ್ನು ತೆಗೆದುಕೊಂಡು, ಅವರು ನೀಡಿರುವ ಹೇಳಿಕೆಗಳ ಮೇಲೆ ಈ ವಿಚಾರ ಈವರೆಗೆ ಬಂದಿದೆ. ಯಾವ್ ಯಾವುದೋ ವಿಷಯದ ಪ್ರಸ್ತಾಪವನ್ನ ತರುತ್ತಿದ್ದಾರೆ. ಇದಕ್ಕೂ ನನಗೂ ಸಂಬಂಧವಿಲ್ಲ, ನನ್ನ ಹೋರಾಟವೇ ಬೇರೆ, ಆ ಹೋರಾಟ ನಿಲ್ಲಲ್ಲ ಎಂದಿದ್ದಾರೆ.

ಅಕ್ರಮ ಗಣಿಗಾರಿಕೆ ವಿಚಾರವನ್ನ ದಿಶಾ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೆ. ಅಲ್ಲಿ ಇವರ ಹೆಸರು ಅಥವಾ ಯಾರ ಹೆಸರನ್ನು ನಾನು ಪ್ರಸ್ತಾಪ ಮಾಡಿಲ್ಲ. ಅದೇ ಹೋರಾಟ ಮುಂದುವರೆಸುತ್ತೇನೆ. ಗಣಿ ಸಚಿವರ ಬಳಿ ಇವತ್ತು ನಾನು ಟೈಂ ತೆಗೆದುಕೊಂಡಿದ್ದೇನೆ. ಮುಖ್ಯಮಂತ್ರಿಗಳನ್ನ ಭೇಟಿ ಮಾಡುತ್ತೇನೆ. ಈಗಾಗಲೇ ಸಿಎಂಗೆ ಪತ್ರ ನೀಡಿದ್ದೇನೆ, ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಅಂತಾ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img