Friday, July 23, 2021
Homeದೆಹಲಿಜುಲೈ 22ರಂದು ರೈತರಿಂದ ಪ್ರತಿಭಟನೆ : ರಾಕೇಶ್ ಟಿಕಾಯತ್

ಇದೀಗ ಬಂದ ಸುದ್ದಿ

ಜುಲೈ 22ರಂದು ರೈತರಿಂದ ಪ್ರತಿಭಟನೆ : ರಾಕೇಶ್ ಟಿಕಾಯತ್

ನವದೆಹಲಿ : ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರೆದಿದೆ. ಜುಲೈ 22ರಿಂದ ಪಾರ್ಲಿಮೆಂಟ್​ನ ಹೊರಗೆ ಸುಮಾರು 200 ರೈತರಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.

ಕಳೆದ ವರ್ಷ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಇದೇ ವೇಳೆ ಸಂಸತ್​ನ ಮಾನ್ಸೂನ್ ಅಧಿವೇಶನ ನಡೆಯುಲಿದೆ.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೃಷಿ ಕಾನೂನುಗಳ ಬಗ್ಗೆ ಕೇಂದ್ರ ಸರ್ಕಾರವು ಚರ್ಚೆಯನ್ನು ಬಯಸಿದರೆ, ನಾವು ಮಾತುಕತೆಗೆ ಸಿದ್ಧರಿದ್ದೇವೆ. ಆದರೆ, ಮಾತುಕತೆಗಳು ನಡೆಯದಿದ್ದರೆ ಜುಲೈ 22ರಿಂದ ಸುಮಾರು 200 ರೈತರು ಸಂಸತ್ತಿನ ಬಳಿ ಪ್ರತಿಭಟನೆ ನಡೆಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img