Friday, July 30, 2021
Homeದೆಹಲಿಈಶಾನ್ಯ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ವೇರಿಯಂಟ್ ಪತ್ತೆ

ಇದೀಗ ಬಂದ ಸುದ್ದಿ

ಈಶಾನ್ಯ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ವೇರಿಯಂಟ್ ಪತ್ತೆ

ನವದೆಹಲಿ : ಈಗಾಗಲೇ ದೇಶದ ಈಶಾನ್ಯ ಭಾಗದ ಮೂರು ರಾಜ್ಯಗಳಲ್ಲಿ ಕೋವಿಡ್​ನ ರೂಪಾಂತರಿಯಾದ ಡೆಲ್ಟಾ ವೈರಸ್ ಇದೇ ಮೊದಲ ಬಾರಿಗೆ ಕಾಣಿಸಿದೆ ಎಂದು ವೈದ್ಯರು ಶನಿವಾರ ಮಾಹಿತಿ ನೀಡಿದ್ದಾರೆ. ತ್ರಿಪುರಾದಲ್ಲಿ ಡೆಲ್ಟಾ ಪ್ಲಸ್ ವೈರಸ್​ ಸಂಬಂಧಿ ಸೋಂಕು ಕಾಣಿಸಿಕೊಂಡಿದೆ ಎಂದು ಅಗರ್ತಲಾ ಸರ್ಕಾರಿ ವೈದ್ಯಕೀಯ ಕಾಲೇಜು (ಎಜಿಎಂಸಿ) ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ ತಪನ್ ಮಜುಂದಾರ್ ಸ್ಪಷ್ಟನೆ ನೀಡಿದ್ದಾರೆ.

ಈ ಮೊದಲು ಮಿಜೋರಾಂ, ಮಣಿಪುರ, ಅಸ್ಸೋಂನಲ್ಲಿ ಡೆಲ್ಟಾ ವೈರಸ್ ಕಂಡು ಬಂದಿತ್ತು. ಪಶ್ಚಿಮ ಬಂಗಾಳದ ಕಲ್ಯಾಣಿಯಲ್ಲಿರುವ ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ಬಯೋ ಮೆಡಿಕಲ್ ಜಿನೋಮಿಕ್ಸ್ (ಎನ್​ಐಬಿಎಂಜಿ)ಯಲ್ಲಿ ತ್ರಿಪುರಾದ ಸ್ಯಾಂಪಲ್​ಗಳಲ್ಲಿ ವೈರಸ್​ಗಳ ಮ್ಯೂಟೆಂಟ್​ಗಳನ್ನು ಪರೀಕ್ಷೆ ಮಾಡಲಾಗಿದೆ. ಈ ವೇಳೆ 138 ಡೆಲ್ಟಾ ಪ್ಲಸ್, 10 ಡೆಲ್ಟಾ ಮತ್ತು ಮೂರು ಯುಕೆ ವೇರಿಯಂಟ್​ಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img