Friday, July 23, 2021
Homeಸುದ್ದಿ ಜಾಲಆಯುರ್ವೇದ ಕ್ಷೇತ್ರದ ದಿಗ್ಗಜ ಡಾ. ಪಿ.ಕೆ. ವಾರಿಯರ್​ ಇನ್ನಿಲ್ಲ

ಇದೀಗ ಬಂದ ಸುದ್ದಿ

ಆಯುರ್ವೇದ ಕ್ಷೇತ್ರದ ದಿಗ್ಗಜ ಡಾ. ಪಿ.ಕೆ. ವಾರಿಯರ್​ ಇನ್ನಿಲ್ಲ

ಮಲಪ್ಪುರಂ(ಕೇರಳ): ಆಯುರ್ವೇದ ಕ್ಷೇತ್ರದ ದಿಗ್ಗಜರೆಂದು ಗುರುತಿಸಿಕೊಂಡಿದ್ದ ಶತಾಯುಷಿ ಡಾ. ಪಿ.ಕೆ ವಾರಿಯರ್​ ನಿಧನರಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರ ಕುಟುಂಬ ಮಾಹಿತಿ ಹಂಚಿಕೊಂಡಿದೆ. ಡಾ. ಪಿ.ಕೆ.ವಾರಿಯರ್ ಮೂಲತಃ ಕೇರಳದ ಮಲ್ಲಪುರಂನ ಕೊಟ್ಟಕಲ್​ನವರು. 1954ರಿಂದಲೂ ಆರ್ಯ ವೈದ್ಯ ಶಾಲೆಯ ವ್ಯವಸ್ಥಾಪಕ ಟ್ರಸ್ಟಿ ಆಗಿ ಸೇವೆ ಸಲ್ಲಿಸಿದ್ದ ಇವರು ದೇಶಾದ್ಯಂತ ಆಯುರ್ವೇದ ಚಿಕಿತ್ಸೆ ಜನಪ್ರೀಯಗೊಳಿಸಲು ಕೆಲಸ ಮಾಡಿದ್ದರು.

1921ರ ಜೂನ್​​ 5ರಂದು ಜನಸಿದ್ದ ಇವರು ಸ್ವಾತಂತ್ರ್ಯ ಹೋರಾಟಗಾರರು ಎಂಬುದು ಗಮನಾರ್ಹವಾಗಿದೆ. 20ನೇ ವಯಸ್ಸಿನಲ್ಲೇ ಆಯುರ್ವೇದ ಶಾಲೆಗೆ ಸೇರಿದ್ದ ಇವರು, ಸಾವಿರಾರು ರೋಗಿಗಳು ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರು ಹಾಗೂ ಜನಪ್ರೀಯ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಇವರ ಸಾಧನೆ ಗುರುತಿಸಿ ಭಾರತ ಸರ್ಕಾರ 1999ರಲ್ಲಿ ಪದ್ಮಶ್ರೀ ಹಾಗೂ 2010ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img