Friday, July 23, 2021
Homeಕ್ರೈಂ ನ್ಯೂಸ್ಬೆಳ್ಳೂರು ಕ್ರಾಸ್ ಬಳಿ ಭೀಕರ ಅಪಘಾತ

ಇದೀಗ ಬಂದ ಸುದ್ದಿ

ಬೆಳ್ಳೂರು ಕ್ರಾಸ್ ಬಳಿ ಭೀಕರ ಅಪಘಾತ

 ಜಿಲ್ಲೆಯಲ್ಲಿಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟಾಟಾ ಏಸ್​ವೊಂದು ಕ್ಯಾಂಟರ್​ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬೆಳ್ಳೂರು ಕ್ರಾಸ್ ಬಳಿ ನಡೆದಿದೆ.

ಯೋಗೇಶ್ (30) ಹಾಗೂ ಬೇಬಿ (18) ಮೃತಪಟ್ಟವರು. ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರ ಬಾಚಹಳ್ಳಿಯ ಜಯರಾಮೇಗೌಡ ಅವರ ಕುಟುಂಬ ದೇವರ ದರ್ಶನಕ್ಕಾಗಿ ಚುಂಚನಗಿರಿಗೆ ತೆರಳಿದ್ದರು. ದೇವರ ದರ್ಶನ‌ ಮುಗಿಸಿ ವಾಪಸ್ ಬರುವಾಗ ಬೆಳ್ಳೂರು ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಘಟನೆಯಿಂದ ಟಾಟಾ ಏಸ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಚಾಲಕ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img