Thursday, July 29, 2021
Homeಸುದ್ದಿ ಜಾಲಕೇರಳದಲ್ಲಿ 14 ಜನರಲ್ಲಿ ಝಿಕಾ ವೈರಸ್ ಪತ್ತೆ

ಇದೀಗ ಬಂದ ಸುದ್ದಿ

ಕೇರಳದಲ್ಲಿ 14 ಜನರಲ್ಲಿ ಝಿಕಾ ವೈರಸ್ ಪತ್ತೆ

ತಿರುವನಂತಪುರಂ: ಕೇರಳದ ಓರ್ವ ಮಹಿಳೆಗೆ ಝಿಕಾ ವೈರಸ್ ಸೋಂಕು ತಗುಲಿದ್ದು,14 ಜನರಲ್ಲಿ ಲಕ್ಷಣ ಕಾಣಿಸಿಕೊಂಡಿತ್ತು. ಇದರ ಪರಿಶೀಲನೆಗಾಗಿ ಪುಣೆಗೆ ಮಾದರಿಗಳನ್ನು ಕಳುಹಿಸಿಕೊಡಲಾಗಿದ್ದು, ಇದೀಗ ೧೪ ಜನರಿಗೂ ಝಿಕಾ ಸೋಂಕು ಇರುವುದು ದೃಡವಾಗಿದೆ.

ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಝಿಕಾ ವೈರಸ್​ ಮತ್ತೆ 14 ಜನರಿಗೆ ವಕ್ಕರಿಸಿದೆ. ಈ ಮೂಲಕ ಝಿಕಾ ಸೋಂಕಿತರ ಸಂಖ್ಯೆ 15ಕ್ಕೆ ಏರಿದೆ. ಈ ರೋಗವು ಸೊಳ್ಳೆಗಳಿಂದ ಹರಡಲಿದೆ ಎಂದು ತಿಳಿದು ಬಂದಿದೆ.

ತಿರುವನಂಪುರಂನ ಪರಶಾಲದ 24 ವರ್ಷದ ಗರ್ಭಿಣಿಯಲ್ಲಿ ಮೊದಲಿಗೆ ಸೋಂಕು ಕಾಣಿಸಿತ್ತು. ಜ್ವರ, ತಲೆನೋವು, ಚರ್ಮದ ಮೇಲೆ ಕೆಂಪು ಗುರುತುಗಳಂಥ ರೋಗ ಲಕ್ಷಣ ಹೊಂದಿರುವ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img