Sunday, August 1, 2021
Homeಜಿಲ್ಲೆಮೈಸೂರುಮುಂದೂಡಲ್ಪಟ್ಟಿದ್ದ KSET ಪರೀಕ್ಷೆ ಮರು ದಿನಾಂಕ ನಿಗದಿ

ಇದೀಗ ಬಂದ ಸುದ್ದಿ

ಮುಂದೂಡಲ್ಪಟ್ಟಿದ್ದ KSET ಪರೀಕ್ಷೆ ಮರು ದಿನಾಂಕ ನಿಗದಿ

ಮೈಸೂರು : ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆ-ಸೆಟ್)ಗೆ ನಿಗದಿ ಪಡಿಸಲಾಗಿದ್ದಂತ ಪರೀಕ್ಷಾ ದಿನಾಂಕವನ್ನು ಕೊರೋನಾ ಕಾರಣದಿಂದಾಗಿ ಮುಂದೂಡಲಾಗಿತ್ತು. ಇಂತಹ ಪರೀಕ್ಷೆಗೆ ಮತ್ತೆ ದಿನಾಂಕ 25-07-2021ರಂದು ನಡೆಸಲಾಗುತ್ತದೆ ಎಂಬುದಾಗಿ ಮರು ದಿನಾಂಕವನ್ನು ನಿಗದಿ ಪಡಿಸಲಾಗಿದೆ.

ಈ ಕುರಿತಂತೆ ಮೈಸೂರು ವಿಶ್ವವಿದ್ಯಾಲಯದ ಕೆಸೆಟ್ ಕೇಂದ್ರದ ಸಂಯೋಜನಾಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಮೈಸೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು ದಿನಾಂಕ 11-04-2021ರಂದು ನಡೆಸಬೇಕಿದ್ದ ಪರೀಕ್ಷೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಸದರಿ ಕೆಸೆಟ್ 2021ರ ಪರೀಕ್ಷೆಯನ್ನು 25-07-2021ರ ಭಾನುವಾರದಂದು ನಡೆಸಲು ತೀರ್ಮಾನಿಸಲಾಗಿರುತ್ತದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img