Sunday, August 1, 2021
Homeಜಿಲ್ಲೆಬೆಂಗಳೂರುಪದವಿ ಕಾಲೇಜುಗಳ ಆರಂಭಕ್ಕೆ ತೀರ್ಮಾನ ಆಗಿಲ್ಲ : ಡಿಸಿಎಂ

ಇದೀಗ ಬಂದ ಸುದ್ದಿ

ಪದವಿ ಕಾಲೇಜುಗಳ ಆರಂಭಕ್ಕೆ ತೀರ್ಮಾನ ಆಗಿಲ್ಲ : ಡಿಸಿಎಂ

ಬೆಂಗಳೂರು : ಕಳೆದೆರಡು ವರ್ಷದಿಂದ ವಿದ್ಯಾರ್ಥಿಗಳು ಆನ್‌ಲೈನ್ ಕ್ಲಾಸ್ ಅಂತ ಮನೆಯಲ್ಲೇ ಕಾಲ ಕಳೆದಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದ ಮೇಲೆ ಭೌತಿಕವಾಗಿ ಡಿಗ್ರಿ ಕಾಲೇಜ್ ಆರಂಭಿಸಲು ಚಿಂತನೆ ನಡೆಸಲಾಯಿತು. ಆದ್ರೆ, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ತೀರ್ಮಾನ ಆಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ, ಉಪ ಮುಖ್ಯಮಂತ್ರಿ ಡಾ. ಸಿ ಎನ್ ‌ಅಶ್ವತ್ಥ್ ನಾರಾಯಣ ಸ್ಪಷ್ಟಪಡಿಸಿದರು.

ಈ ಬಗ್ಗೆ ಹೇಳಿಕೆ ನೀಡಿರುವ ಡಿಸಿಎಂ, ಸದ್ಯಕ್ಕೆ ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದು ಮಾತ್ರ ಸರ್ಕಾರದ ಆದ್ಯತೆ. ಅದರ ಹೊರತಾಗಿ ಕಾಲೇಜುಗಳನ್ನು ಆರಂಭಿಸುವುದಲ್ಲ. ಕೋವಿಡ್‌ ಸೋಂಕು ಇನ್ನೂ ಪೂರ್ಣವಾಗಿ ನಿವಾರಣೆ ಆಗದಿರುವ ಹಿನ್ನೆಲೆ, ಈ ಬಗ್ಗೆ ಯಾವುದೇ ತೀರ್ಮಾನ ಮಾಡಲಾಗಿಲ್ಲ ಎಂದಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img