Friday, July 23, 2021
Homeಜಿಲ್ಲೆಬೆಂಗಳೂರುಸಂಸದೆ ಸುಮಲತಾ ಅಂಬರೀಶ್ ದಿಢೀರ್ ಸುದ್ದಿಗೋಷ್ಠಿ

ಇದೀಗ ಬಂದ ಸುದ್ದಿ

ಸಂಸದೆ ಸುಮಲತಾ ಅಂಬರೀಶ್ ದಿಢೀರ್ ಸುದ್ದಿಗೋಷ್ಠಿ

ಬೆಂಗಳೂರು: ಬೆಂಗಳೂರಿನಲ್ಲಿ ಸಂಸದೆ ಸುಮಲತಾ ಅಂಬರೀಶ್ ದಿಢೀರ್ ಸುದ್ದಿಗೋಷ್ಠಿ ನಡೆಸಿ, ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಬರೀಶ್ ಹೆಸರು ದುರ್ಬಳಕೆ ಬಗ್ಗೆ ಬೇಸರ ವ್ಯಕ್ತಪಡಿಸಿ, ಭಾವುಕರಾಗಿ ಮಾತನಾಡಿದ್ದಾರೆ.

ಅಂಬರೀಶ್ ಹೆಸರು ಹೇಳಲು ಯೋಗ್ಯತೆ ಇಲ್ಲದವರು ಇಂದು ಹೆಸರು ಬಳಸಿ ರಾಜಕೀಯ ಮಾಡುತ್ತಿದ್ದಾರೆ. ಅಂಬರೀಶ್ ಕಾಲದಲ್ಲೇ ಅಕ್ರಮ ನಡೆದಿತ್ತು ಎಂದು ಆರೋಪ ಮಾಡುತ್ತಿದ್ದಾರೆ

ಅಂಬರೀಶ್ ಕಾಲದಲ್ಲಿ ಅಕ್ರಮ ನಡೆದಿದ್ದರೆ ದಾಖಲೆ ಸಮೇತ ದೂರು ನೀಡಲಿ, ಇಷ್ಟು ದಿನ ಸುಮ್ಮನೆ ಇದ್ದಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಅಂಬರೀಶ್ ಸ್ಮಾರಕ ವಿಚಾರವಾಗಿ ದೊಡ್ಡಣ್ಣ, ಶಿವರಾಮಣ್ಣ ಹೋಗಿದ್ದಾಗ ಇವರು ಮಾತನಾಡಿದ್ದು ಸ್ವಲ್ಪ ನೆನಪು ಮಾಡಿಕೊಳ್ಳಲಿ; ಹಾಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಹಿ ಹಾಕಿದ್ದು ನನಗೆ ನೆನಪಿದೆ. ಸ್ಮಾರಕ ನಿರ್ಮಾಣ ಅಭಿಮಾನಗಳ ಬೇಡಿಕೆ ಅದಕ್ಕೆ ಅಂದಿನ ಸರ್ಕಾರ ಸ್ಪಂದಿಸಿದ ರೀತಿ ಜನರಿಗೆ ಗೊತ್ತಿದೆ ಎಂದರು.

ಅಂಬರೀಷ್ ಮೃತದೇಹವನ್ನು ಮಂಡ್ಯಕ್ಕೆ ಕೊಂಡೊಯ್ದ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಹೇಳಿದ್ದೇನು ಎಂಬುದು ಮಾಧ್ಯಮಗಳ ಬಳಿ ವಿಡಿಯೋಯಿದೆ, ಪರಿಶೀಲಿಸಿ ಎಂದ ಸುಮಲತಾ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img