Friday, July 23, 2021
Homeಬೆಂಗಳೂರುಹೆಚ್ಡಿಕೆ ವಿರುದ್ಧ ರಾಕ್ ಲೈನ್ ವೆಂಕಟೇಶ್ ಕಿಡಿ

ಇದೀಗ ಬಂದ ಸುದ್ದಿ

ಹೆಚ್ಡಿಕೆ ವಿರುದ್ಧ ರಾಕ್ ಲೈನ್ ವೆಂಕಟೇಶ್ ಕಿಡಿ

ಬೆಂಗಳೂರು : ಕೆಆರ್ ಎಸ್ ಡ್ಯಾಂ ಮತ್ತು ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ವಾದ ತಾರಕಕ್ಕೆ ಏರಿರುವಾಗಲೇ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾಕ್ ಲೈನ್ ವೆಂಕಟೇಶ್, ಹೆಚ್.ಡಿ.ಕುಮಾರಸ್ವಾಮಿ ಅವರು ಅಂಬರೀಶ್ ವಿಚಾರವಾಗಿ ಮಾತನಾಡುವಾಗ ಪ್ರಜ್ಞೆ ಇರಲಿ. ಚಿತ್ರರಂಗದ ಬಗ್ಗೆ ಮಾತನಾಡುತ್ತೀರಾ ಅಲ್ವಾ? ಚಿತ್ರರಂಗದಿಂದ ನೀವೂ ಲಾಭ ಮಾಡಿಕೊಂಡಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಭಿಷೇಕ್ ಒತ್ತಾಯ ಮಾಡಿ ತಮ್ಮ ತಂದೆ ಅಂಬರೀಶ್ ಮೃತದೇಹವನ್ನು ಮಂಡ್ಯಕ್ಕೆ ಕೊಂಡೊಯ್ಯಲು ಹೇಳಿದ್ದರು. ಅಂಥದ್ದರಲ್ಲಿ ಸಾವಿನ ರಾಜಕಾರಣ ಯಾಕೆ ಮಾಡಲು ಹೋಗ್ತೀದ್ದೀರಾ? ದಾರಿಯಲ್ಲಿ ಹೋಗ್ತಿದ್ದ ದಾಸಪ್ಪ ಸಿಎಂ ಆಗಿದ್ದರೂ ಆ ಕೆಲಸ ಮಾಡುತ್ತಿದ್ದರು. ನೀವು ಮಾತನಾಡಿದ್ದು ತುಂಬಾ ನೋವಾಗುತ್ತೆ ಕುಮಾರಣ್ಣ ಎಂದು ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img