Thursday, July 29, 2021
Homeಸುದ್ದಿ ಜಾಲಜು.15 ರಿಂದ ದುಬೈಗೆ ವಿಮಾನ ಸೇವೆ ಪುನರಾರಂಭ

ಇದೀಗ ಬಂದ ಸುದ್ದಿ

ಜು.15 ರಿಂದ ದುಬೈಗೆ ವಿಮಾನ ಸೇವೆ ಪುನರಾರಂಭ

ನವದೆಹಲಿ : ಜುಲೈ 15ರಿಂದ ಭಾರತದ ಹಲವಾರು ನಗರಗಳಿಂದ ದುಬೈಗೆ ತೆರಳಲು ವಿಮಾನ ಬುಕಿಂಗ್ ಮತ್ತೆ ಆರಂಭವಾಗಲಿದೆ. ಆದಾಗ್ಯೂ, ಅಬುಧಾಬಿ ಜುಲೈ 21ರಿಂದ ಭಾರತೀಯ ಪ್ರಯಾಣಿಕರಿಗಾಗಿ ವಿಮಾನಗಳನ್ನು ಮತ್ತೆ ತೆರೆಯಲಿದೆ.

ವಿಸ್ಟಾರಾ ಏರ್ ಲೈನ್ ವೆಬ್ ಸೈಟ್ ಪ್ರಕಾರ, ಮುಂಬೈ (ಬಿಒಎಂ) ನಿಂದ ದುಬೈ (ಡಿಎಕ್ಸ್ ಬಿ) ವರೆಗಿನ ಪ್ರಯಾಣ ದರವು ₹17,602 ರಿಂದ ಪ್ರಾರಂಭವಾಗುತ್ತದೆ. ಇನ್ನು ಜುಲೈ 15 ಮತ್ತು 16 ರಂದು ಕೆಲವು ಟಿಕೆಟ್ʼಗಳು ಮಾತ್ರ ಉಳಿದಿವೆ. ದೆಹಲಿಯಿಂದ ದುಬೈಗೆ ವಿಮಾನ ದರ ₹13,816 ಆಗಿದೆ. ಇಂಡಿಗೊ ಏರ್ ಲೈನ್ಸ್ ಹೆಚ್ಚುವರಿಯಾಗಿ ತಮ್ಮ ವೆಬ್ ಸೈಟ್ʼನಲ್ಲಿ ಬುಕಿಂಗ್ ಪ್ರಾರಂಭಿಸಿದೆ.

ಜುಲೈ 15 ರಂದು ಬುಕ್‌ ಮಾಡೋದಾದ್ರೆ, ಮುಂಬೈನಿಂದ ದುಬೈಗೆ ಇಂಡಿಗೊ ಏರ್ ಲೈನ್ಸ್ ದರಗಳು ₹21,000 ರಿಂದ ₹29,000 ಕ್ಕೆ ಏರಿಕೆಯಾಗಿವೆ. ಇನ್ನು ಕೊಚ್ಚಿಯಿಂದ ಇಂಡಿಗೊ ವಿಮಾನ ಟಿಕೆಟ್ʼಗಳು ₹31,181 ರವರೆಗೆ ಬೆಲೆ ಬಾಳಬಹುದು. ಕೆಲವು ವಿಮಾನಗಳನ್ನ ₹23,959 ಕ್ಕೂ ಸಹ ಕಾಣಬಹುದು. ಇಂಡಿಗೊವೆಬ್ ತಾಣದ ಪ್ರಕಾರ, ಹೈದರಾಬಾದ್ ನಿಂದ ದುಬೈಗೆ ವಿಮಾನ ದರಗಳು ₹23,234 ರಿಂದ ₹28,727 ಕ್ಕೆ ಏರಿಳಿತಗೊಳ್ಳುತ್ತವೆ. ಮುಖ್ಯವಾಗಿ, ವಿಮಾನಯಾನ ಸಂಸ್ಥೆಗಳ ವೆಬ್ ಸೈಟ್ ಗಳ ಪ್ರಕಾರ ದುಬೈಗೆ ಸಂಪರ್ಕಿಸುವ ವಿಮಾನಗಳಿವೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img