Friday, July 23, 2021
Homeಜಿಲ್ಲೆಬೆಳಗಾವಿಗರ್ಭಿಣಿಯರಿಗೆ ಕೋವಿಡ್ ಲಸಿಕೆ ನೀಡಿದ ಡಾ. ಅಂಜಲಿ ನಿಂಬಾಳ್ಕರ್

ಇದೀಗ ಬಂದ ಸುದ್ದಿ

ಗರ್ಭಿಣಿಯರಿಗೆ ಕೋವಿಡ್ ಲಸಿಕೆ ನೀಡಿದ ಡಾ. ಅಂಜಲಿ ನಿಂಬಾಳ್ಕರ್

ಬೆಳಗಾವಿ : ವೈದ್ಯೆಯೂ ಆಗಿರುವ ಜಿಲ್ಲೆಯ ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡಿದ್ದಾರೆ. ಖಾನಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕಿ ಅಂಜಲಿ ನಿಂಬಾಳ್ಕರ್, 20ಕ್ಕೂ ಅಧಿಕ ಗರ್ಭಿಣಿಯರ ಆರೋಗ್ಯ ತಪಾಸಣೆ ಮಾಡಿ ಗಮನ ಸೆಳೆದರು. ಅಲ್ಲದೆ ಕೋವಿಡ್ ಲಸಿಕೆ ಮಹತ್ವವನ್ನು ಗರ್ಭಿಣಿಯರಿಗೆ ತಿಳಿಸಿದರು.

ಸ್ತ್ರೀ ರೋಗ ತಜ್ಞೆಯೂ ಆಗಿರುವ ನಿಂಬಾಳ್ಕರ್, ಶಾಸಕಿ ಆದ ಬಳಿಕ ಅಭ್ಯಾಸ ನಿಲ್ಲಿಸಿದ್ದರು. ಮೂರು ವರ್ಷಗಳ ಬಳಿಕ ಸರ್ಕಾರಿ ಆಸ್ಪತ್ರೆಗೆ ತೆರಳಿ ಗರ್ಭಿಣಿಯರ ಆರೋಗ್ಯ ವಿಚಾರಿಸುವ ಜೊತೆಗೆ ಲಸಿಕೆಯನ್ನೂ ನೀಡಿದ್ದಾರೆ. ಹೆರಿಗೆ ಆಗುವ ತನಕ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಅವರು ತಿಳಿ ಹೇಳಿದರು. ಶಾಸಕಿಯ ಸರಳತೆಗೆ ಮಹಿಳೆಯರು ಹರ್ಷ ವ್ಯಕ್ತಪಡಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img