Sunday, August 1, 2021
Homeಸುದ್ದಿ ಜಾಲಸುಮಲತಾಗೆ ಟಾಂಗ್‌ ಕೊಟ್ಟ ಡಿಕೆಶಿ

ಇದೀಗ ಬಂದ ಸುದ್ದಿ

ಸುಮಲತಾಗೆ ಟಾಂಗ್‌ ಕೊಟ್ಟ ಡಿಕೆಶಿ

ಬೆಂಗಳೂರು : ಅಣೆಕಟ್ಟು ಬಿರುಕು ಬಿಟ್ಟಿದೆ ಅಂತಾ ಜನರಲ್ಲಿ ಆತಂಕ ಮೂಡಿಸುವ ಕೆಲಸ ನಾವು ಮಾಡಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಅಣೆಕಟ್ಟು ಬಿರುಕು ಬಿಟ್ಟಿರುವ ವಿಚಾರವನ್ನು ಸರ್ಕಾರ ನೋಡಿಕೊಳ್ಳುತ್ತದೆ. ಅದಕ್ಕಾಗಿ ತಾಂತ್ರಿಕ ತಜ್ಞರ ಸಮಿತಿ ಇದೆ. ಸಮಿತಿ ಜೊತೆ ಸರ್ಕಾರ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಬೇಕು. ಮೇಕೆದಾಟು ಯೋಜನೆಯನ್ನ ಸರ್ಕಾರ ಶೀಘ್ರದಲ್ಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಹೆಚ್.ಕೆ.ಪಾಟೀಲ್ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಾಟೀಲ್ ಪಕ್ಷದ ಹಿರಿಯರು ನಾಯಕರು. ಪಕ್ಷದ ವಿಚಾರವಾಗಿ ಸಲಹೆ ನೀಡಲು‌ ಬಂದಿರುತ್ತಾರೆ. ಪಕ್ಷದ ಅಧ್ಯಕ್ಷನಾಗಿ ಕೇಳಿಸಿಕೊಳ್ಳುವುದು ನನ್ನ ಕರ್ತವ್ಯ. ಅದು ಬಿಟ್ಟು ಬೇರೇನು ವಿಚಾರವಿಲ್ಲ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img