Sunday, August 1, 2021
Homeಕೋವಿಡ್-19ವೇಗ ಪಡೆದುಕೊಂಡ ಡೆಲ್ಟಾ ರೂಪಾಂತರ!

ಇದೀಗ ಬಂದ ಸುದ್ದಿ

ವೇಗ ಪಡೆದುಕೊಂಡ ಡೆಲ್ಟಾ ರೂಪಾಂತರ!

ಭಾರತದಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ಕಾಣಿಸಿಕೊಂಡ ಡೆಲ್ಟಾ ರೂಪಾಂತರವು ಅಮೆರಿಕದಲ್ಲಿ ವೇಗವಾಗಿ ಹರಡುತ್ತಿದೆ. ಇತರೆ ರೂಪಾಂತರಗಳಿಗೆ ಹೋಲಿಸಿದ್ರೆ ಈ ವೈರಸ್​ ತುಂಬಾ ವಿಭಿನ್ನ ಎಂದು ಅಮೆರಿಕ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇದು ಅತ್ಯಂತ ವೇಗವಾಗಿ ಹರಡುವುದರ ಜತೆಗೆ ಮಕ್ಕಳ ಮೇಲೂ ತೀವ್ರ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಅಮೆರಿಕದ ಕೆಲ ಭಾಗಗಳಲ್ಲಿ ವರದಿಯಾದ ಕೋವಿಡ್ ಸೋಂಕಿತರಲ್ಲಿ ಶೇ.80ಕ್ಕಿಂತ ಹೆಚ್ಚು ಜನರಿಗೆ ಡೆಲ್ಟಾ ವೈರಸ್ ಇರುವುದು ದೃಢಪಟ್ಟಿದೆ. ಮಿಸ್ಸೌರಿ, ಕಾನ್ಸಾಸ್ ಮತ್ತು ಅಯೋವಾ ರಾಜ್ಯಗಳಲ್ಲಿ ಶೇ.80ರಷ್ಟು ಡೆಲ್ಟಾ ರೂಪಾಂತರ ಪ್ರಕರಣಗಳಿವೆ.

ಸಿಡಿಸಿಪಿ ಪ್ರಕಾರ, ಉತಾಹ್ ಮತ್ತು ಕೊಲೊರಾಡೋ ರಾಜ್ಯಗಳಲ್ಲಿ ಕೋವಿಡ್​​ ಬಂದಿದ್ದ ಶೇ.74.3ರಷ್ಟು ಜನರಿಗೆ ಡೆಲ್ಟಾ ವೈರಸ್ ತಗುಲಿದೆ. ಟೆಕ್ಸಾಸ್, ಲೂಯಿಸಿಯಾನ, ಅರ್ಕಾನ್ಸಾಸ್ ಮತ್ತು ಒಕ್ಲಹೋಮದಲ್ಲಿ ಹೊಸದಾಗಿ ದಾಖಲಾದ ಕೊರೊನಾ ಪ್ರಕರಣಗಳಲ್ಲಿ 58.8 ಪ್ರತಿಶತ ಈ ರೀತಿಯದ್ದಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img