Friday, July 23, 2021
Homeಸುದ್ದಿ ಜಾಲಜೆಡಿಎಸ್ ಪಕ್ಷಕ್ಕೆ ಬಿಗ್ ಶಾಕ್

ಇದೀಗ ಬಂದ ಸುದ್ದಿ

ಜೆಡಿಎಸ್ ಪಕ್ಷಕ್ಕೆ ಬಿಗ್ ಶಾಕ್

ಒಂದೆಡೆ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ಮಂಡ್ಯ ಮಹಾಯುದ್ಧ ಮುಂದುವರೆದಿದ್ದರೇ, ಮತ್ತೊಂದೆಡೆ ಜೆಡಿಎಸ್ ನಲ್ಲಿ ಕಾರ್ಯಕರ್ತರಿಗೆ ಬೆಲೆಯೇ ಇಲ್ಲ. ಪಕ್ಷದಲ್ಲಿ ಬಕೆಟ್ ಹಿಡಿಯೋರಿಗೆ, ಕಿವಿ ಕಡಿಯುವವರಿಗೆ ಮಾತ್ರವೇ ಸ್ಥಾನ ಮಾನ ಎಂಬುದಾಗಿ ಆರೋಪಿಸಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾಗಿದ್ದಂತ ಪ್ರದೀಪ್ ಗೌಡ ಮಾಲಿ ಪಾಟೀಲ್, ರಾಜೀನಾಮೆ ಸಲ್ಲಿಸಿದ್ದಾರೆ.

ಈ ಕುರಿತಂತೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಂತ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಪ್ರದೀಪಗೌಡ ಮಾಲಿಪಾಟೀಲ್ ಅವರು, ದಶಕಗಳಿಂದ ಜೆಡಿಎಸ್ ಪಕ್ಷಕ್ಕಾಗಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ಆದ್ರೇ ಸೂಕ್ತ ಸ್ಥಾನಮಾನವೇ ಸಿಕ್ಕಿಲ್ಲ. ಎರಡು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಥಿಸಿದಂತ ಸಂದರ್ಭದಲ್ಲಿಯೂ ವರಿಷ್ಠರು ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ ಎಂಬುದಾಗಿ ತನ್ನ ಅಸಮಾಧಾನವನ್ನು ತೋಡಿಕೊಂಡರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img