Friday, July 30, 2021
Homeಸುದ್ದಿ ಜಾಲಸ್ವೀಡನ್‌ನಲ್ಲಿ ವಿಮಾನ ಅಪಘಾತ

ಇದೀಗ ಬಂದ ಸುದ್ದಿ

ಸ್ವೀಡನ್‌ನಲ್ಲಿ ವಿಮಾನ ಅಪಘಾತ

ಸ್ವೀಡನ್‌ನ ಒರೆಬ್ರೊ ಪ್ರದೇಶದ ಹೊರವಲಯದಲ್ಲಿ ವಿಮಾನ ಅಪಘಾತ ಸಂಭವಿಸಿದ್ದು, ಪರಿಣಾಮ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ವೀಡಿಷ್ ಪೊಲೀಸರು ತಿಳಿಸಿದ್ದಾರೆ.

ಡಿಎಚ್‌ಸಿ -2 ಟರ್ಬೊ ಬೀವರ್ ಎಂಬ ವಿಮಾನದಲ್ಲಿ ಎಂಟು ಸ್ಕೈ ಡೈವರ್‌ಗಳು ಮತ್ತು ಒಬ್ಬ ಪೈಲಟ್‌ ಪ್ರಯಾಣಿಸುತ್ತಿದ್ದರು. ಟೇಕ್‌ಆಫ್ ಆದ ಸ್ವಲ್ಪ ಸಮಯದ ನಂತರ ಒರೆಬ್ರೊ ವಿಮಾನ ನಿಲ್ದಾಣದ ಬಳಿ ಫ್ಲೈಟ್​​ ನೆಲಕ್ಕೆ ಅಪ್ಪಳಿಸಿದ ಹೊತ್ತಿ ಉರಿದಿದೆ. ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ದುರಂತದಲ್ಲಿ ಮಡಿದವರಿಗೆ ಪ್ರಧಾನಿ ಸ್ಟೀಫನ್ ಲೋಫ್ವೆನ್ ಸಂತಾಪ ಸೂಚಿಸಿರುತ್ತಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img