Sunday, August 1, 2021
Homeಜಿಲ್ಲೆಬೆಂಗಳೂರುಕುಮಾರಸ್ವಾಮಿ ವಿರುದ್ಧ ನಟ ದೊಡ್ಡಣ್ಣ ಗಂಭೀರ ಆರೋಪ

ಇದೀಗ ಬಂದ ಸುದ್ದಿ

ಕುಮಾರಸ್ವಾಮಿ ವಿರುದ್ಧ ನಟ ದೊಡ್ಡಣ್ಣ ಗಂಭೀರ ಆರೋಪ

ಬೆಂಗಳೂರು : ಕೆ ಆರ್ ಎಸ್ ಡ್ಯಾಂ ಬಿರುಕು ವಿಚಾರದಿಂದ ಉಂಟಾಗಂದ ಮಂಡ್ಯ ಮಹಾಯುದ್ಧ ಇದೀಗ ತಾರಕಕ್ಕೇರಿದೆ. ಮುಖ್ಯಮಂತ್ರಿಯಾಗಿದ್ದಂತ ಸಂದರ್ಭದಲ್ಲಿ ಕುಮಾರಸ್ವಾಮಿ ನಡೆದುಕೊಂಡ ರೀತಿಯ ಬಗ್ಗೆ ಈಗಾಗಲೇ ಸಂಸದೆ ಸುಮಲತಾ ಗಂಭೀರ ಆರೋಪ ಮಾಡಿದ್ದರು. ಇದಾದ ಬಳಿಕ ಹಿರಿಯ ನಟ ದೊಡ್ಡಣ್ಣ ಅವರು ಕೂಡ ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಹಿರಿಯ ನಟ ದೊಡ್ಡಣ್ಣ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಂತ ಸಂದರ್ಭದಲ್ಲಿ ಕಲಿಯುಗದ ಕರ್ಣ ದಿವಂಗತ ಅಂಬರೀಶ್ ಸ್ಮಾರಕ ನಿರ್ಮಾಣ ಕುರಿತಂತೆ ಲೆಟೆರ್ ತೆಗೆದುಕೊಂಡು ಸಿಎಂ ಭೇಟಿಯಾಗೋದಕ್ಕೆ ತೆರಳಿದ್ದೆನು. ಸುಮಾರು ಅರ್ಧಗಂಟೆ ಕಾಯಿಸಿದಂತ ಅಂದು ಸಿಎಂ ಆಗಿದ್ದ ಕುಮಾರಸ್ವಾಮಿ, ಬಳಿಕ ನನ್ನ ಒಳಗೆ ಕರೆದು ಮಾತನಾಡಿಸಿದರು.

ಈ ಸಂದರ್ಭದಲ್ಲಿ ತಾನು ತಂದಿದ್ದಂತ ಅಂಬರೀಶ್ ಸ್ಮಾರಕ ನಿರ್ಮಾಣ ಮಾಡುವ ಕುರಿತಂತ ಲೆಟರ್ ಅನ್ನು ಅವರ ಕೈಗೆ ನೀಡಿದೆ. ಅದನ್ನು ನೋಡಿದಂತ ಅವರು, ಅಸಡ್ಡೆಯ ಮುಖ ಮಾಡಿ, ಇವರ್ ಏನ್ ಸಾಧನೆ ಮಾಡಿದ್ದಾರೆ.? ಅಂತ ಸ್ಮಾರಕ ನಿರ್ಮಾಣ ಮಾಡಬೇಕು ಎಂಬುದಾಗಿ ಹೇಳುವ ಮೂಲಕ, ತಾನು ನೀಡಿದ್ದಂತ ಲೆಟರ್ ಅನ್ನು ಬಿಸಾಕಿದ್ರು. ಆನಂತ್ರ ತನ್ನೊಂದಿಗೆ ಮಾತನಾಡದೇ, ಬೇರೆಯವರೊಂದಿಗೆ ಮಾತು ಶುರು ಮಾಡಿದ್ರು. ಇದರಿಂದಾಗಿ ತೀವ್ರ ನೋವಾಗಿದ್ದರಿಂದ, ಅಂಬರೀಶ್ ಅಂದು ನಿರ್ಮಾಣ ಮಾಡುತ್ತಿದ್ದಂತ ಹೊಸ ಮನೆ ಬಳಿಗೆ ಬಂದು, ನೋಡುತ್ತ, ಕಣ್ಣೀರಿಟ್ಟಿದ್ದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img