Sunday, August 1, 2021
Homeಜಿಲ್ಲೆಬೆಳಗಾವಿಲಂಚ ಪಡೆಯುತ್ತಿದ್ದ ವೇಳೆ ಪೊಲೀಸ್ ಠಾಣೆಯ ಮೇಲೆ ಎಸಿಬಿ ರೈಡ್

ಇದೀಗ ಬಂದ ಸುದ್ದಿ

ಲಂಚ ಪಡೆಯುತ್ತಿದ್ದ ವೇಳೆ ಪೊಲೀಸ್ ಠಾಣೆಯ ಮೇಲೆ ಎಸಿಬಿ ರೈಡ್

ಬೆಳಗಾವಿ : ಅಧಿಕೃತವಾಗಿ ಪಾನ್ ಮಸಾಲ ಕಾರ್ಖಾನೆ ನಡೆಸುತ್ತಿದ್ದರೂ, ಅನಧಿಕೃತವಾಗಿ ಕಾರ್ಖಾನೆ ನಡೆಸುತ್ತಿದ್ದೀರಿ ಎಂಬುದಾಗಿ ಹೆದರಿಸಿ, ಹಣಕ್ಕೆ ಬೇಡಿಕೆಯನ್ನು ಸದಲಗಾ ಠಾಣೆ ಪೊಲೀಸರು ಇಟ್ಟಿದ್ದರು. ಇದರಿಂದಾಗಿ ನೊಂದ ಪಾನ್ ಮಸಾಲಾ ಮಾಲೀಕ ಎಸಿಬಿಗೆ ದೂರು ನೀಡಿದ್ದರು. ನಿನ್ನೆ ತಡರಾತ್ರಿ 40 ಸಾವಿರ ಲಂಚವನ್ನು ಪೊಲೀಸ್ ಠಾಣೆಯಲ್ಲೇ ಸ್ವೀಕರಿಸುವ ವೇಳೆಯಲ್ಲಿ, ದಾಳಿ ನಡೆಸಿದಂತ ಎಸಿಬಿ ತಂಡ, ಎಸ್ ಐ ಹಾಗೂ ಇಬ್ಬರು ಪೊಲೀಸ್ ಕಾನ್ ಸ್ಟೇಬಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಬೋರಗಾಂವ್ ಎಂಬಲ್ಲಿ ರಾಜು ಪಾಶ್ಚಾಪುರ ಎಂಬುವರು ಅಧಿಕೃತವಾಗಿ ಲೈಸೆನ್ಸ್ ಪಡೆದು, ಪಾನ್ ಮಸಾಲಾ ಕಾರ್ಖಾನೆ ನಡೆಸುತ್ತಿದ್ದರು. ಆದ್ರೇ.. ಇಂತಹ ರಾಜು ಪಾಶ್ಚಾಪುರೆ ಅವರನ್ನು ಅನಧಿಕೃತವಾಗಿ ಪಾನ್ ಮಸಾಲ ಕಾರ್ಖಾನೆ ನಡೆಸುತ್ತಿದ್ದೀಯಾ, ಕೇಸ್ ಹಾಕಿದ್ರೆ ಜೈಲಿಗೆ ಹೋಗ್ತೀಯ. ಪ್ರಕರಣ ಮುಚ್ಚಿಹಾಕಬೇಕು ಅಂದ್ರೆ 50 ಸಾವಿರ ಕೊಡಬೇಕು ಎಂಬುದಾಗಿ ಲಂಚಕ್ಕೆ ಬೇಡಿಕೆಯನ್ನು ಸದಲಗಾ ಠಾಣೆಯ ಪೊಲೀಸರು ಇಟ್ಟಿದ್ದಾರೆ.

ಪೊಲೀಸರ ಕಿರುಕುಳಕ್ಕೆ ಬೇಸತ್ತಂತ ರಾಜು ಪಾಶ್ಚಾಪುರ ಅವರು, ಈ ಸಂಬಂಧ ಎಸಿಬಿಗೆ ದೂರು ನೀಡಿದ್ದರು. ನಿನ್ನೆ ರಾತ್ರಿ ಸದಲಗಾ ಪೊಲೀಸರು ಕೇಳಿದಂತ 50 ಸಾವಿರ ಲಂಚದಲ್ಲಿ, 40 ಸಾವಿರ ಹಣವನ್ನು ಠಾಣೆಗೆ ತೆರಳಿ ನೀಡುತ್ತಿದ್ದಂತ ಸಂದರ್ಭದಲ್ಲೇ, ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಲಂಚ ಸ್ವೀಕರಿಸುತ್ತಿದ್ದಂತ ಎಸ್‌ಐ ಕುಮಾರ್ ಹಿತ್ತಲಮನಿ, ಕಾನ್ ಸ್ಟೇಬಲ್ ಮಾಯಪ್ಪ ಗಡ್ಡೆ, ಶ್ರೀಶೈಲ ಮಂಗಿ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img