Sunday, August 1, 2021
Homeಸುದ್ದಿ ಜಾಲ24ಗಂಟೆಗಳಲ್ಲಿ 43,393 ಕೋವಿಡ್ ಪ್ರಕರಣ ಪತ್ತೆ

ಇದೀಗ ಬಂದ ಸುದ್ದಿ

24ಗಂಟೆಗಳಲ್ಲಿ 43,393 ಕೋವಿಡ್ ಪ್ರಕರಣ ಪತ್ತೆ

ನವದೆಹಲಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 43,393 ನೂತನ ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದ್ದು, 911 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ (ಜುಲೈ 09) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.

ದೇಶದಲ್ಲಿ ಕೋವಿಡ್ 19 ಸೋಂಕು ಪ್ರಕರಣ ಒಟ್ಟು 3,07,52,950ಕ್ಕೆ ಏರಿಕೆಯಾಗಿದೆ. ಈವರೆಗೆ ಭಾರತದಲ್ಲಿ ಕೋವಿಡ್ ನಿಂದ
4,05,939 ಮಂದಿ ಸಾವನ್ನಪ್ಪಿದ್ದಾರೆ. 4,58,727 ಸಕ್ರಿಯ ಕೋವಿಡ್ 19 ಪ್ರಕರಣಗಳಿವೆ ಎಂದು ಹೇಳಿದೆ.

ದೇಶಾದ್ಯಂತ ಈವರೆಗೆ 2,98, 88,284 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24ಗಂಟೆಗಳಲ್ಲಿ 44,459 ಮಂದಿ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.97.19ರಷ್ಟಿದೆ ಎಂದು ಅಂಕಿಅಂಶದಲ್ಲಿ ತಿಳಿಸಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, 42,70,16,605 ಜನರನ್ನು ಕೋವಿಡ್ ಪರೀಕ್ಷೆಗೆ ಗುರಿಪಡಿಸಲಾಗಿದೆ. ಗುರುವಾರ 17,90,708 ಮಂದಿಯನ್ನು ಪರೀಕ್ಷಿಸಲಾಗಿದೆ ಎಂದು ತಿಳಿಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img