Friday, July 30, 2021
Homeಜಿಲ್ಲೆಬೆಂಗಳೂರುನಿರ್ದೇಶಕನ ಪಾತ್ರದಲ್ಲಿ ವಿನಯ್​ ರಾಜಕುಮಾರ್​

ಇದೀಗ ಬಂದ ಸುದ್ದಿ

ನಿರ್ದೇಶಕನ ಪಾತ್ರದಲ್ಲಿ ವಿನಯ್​ ರಾಜಕುಮಾರ್​

ಬೆಂಗಳೂರು: ವಿನಯ್​ ರಾಜಕುಮಾರ್​ ಇದೀಗ ಆಯಕ್ಷನ್​&ಕಟ್​ ಹೇಳುವುದಕ್ಕೆ ಸಜ್ಜಾಗಿದ್ದಾರೆ. ನಟನೆ ಜತೆಗೆ ನಿರ್ದೇಶನಕ್ಕೂ ಇಳಿದರಾ ಅವರು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ವಿನಯ್​ ನಿರ್ದೇಶಕರಾಗುತ್ತಿರುವುದು ರಿಯಲ್​ ಆಗಲ್ಲ, ರೀಲ್​ನಲ್ಲಿ. ಕೀರ್ತಿ ಮೊದಲ ಬಾರಿಗೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ಅಂದೊಂದಿತ್ತು ಕಾಲ’ ಸಿನಿಮಾದಲ್ಲಿ ನಿರ್ದೇಶಕನ ಪಾತ್ರದಲ್ಲಿ ವಿನಯ್​ ನಟಿಸುತ್ತಿದ್ದಾರೆ.

ಈಗಾಗಲೇ ಚಿತ್ರದ ಒಂದಷ್ಟು ಭಾಗದ ಶೂಟಿಂಗ್​ ಸಹ ಮುಗಿದಿದ್ದು, ಜುಲೈ 15ರಿಂದ ಮೂರನೇ ಹಂತದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಬೆಂಗಳೂರು ಬಳಿಕ ತೀರ್ಥಹಳ್ಳಿ ಮತ್ತು ಊಟಿಯಲ್ಲಿ ಶೂಟಿಂಗ್​ ನಡೆಯಲಿದ್ದು, ಕೇರಳದಲ್ಲಿಯೂ ದೃಶ್ಯಗಳನ್ನು ಸೆರೆಹಿಡಿಯಲಿದ್ದಾರೆ. ಈ ಮೊದಲೇ ಹೇಳಿದಂತೆ 1990ರ ಕಾಲಟ್ಟದಲ್ಲಿ ಈ ಸಿನಿಮಾ ಸಾಗಲಿದ್ದು, ಒಟ್ಟು ಮೂರು ರೀತಿಯ ಶೇಡ್​ಗಳಲ್ಲಿ ವಿನಯ್​ ಕಾಣಿಸಿಕೊಳ್ಳಲಿದ್ದಾರೆ. ವಿನಯ್​ಗೆ ಅದಿತಿ ಪ್ರಭುದೇವ, ಕಿರುತೆರೆ ನಟಿ ನಿಶಾ ಜೋಡಿಯಾಗಿದ್ದಾರೆ. ಭುವನ್​ ಸುರೇಶ್​ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ರಾವೇಂದ್ರ ವಿ ಸಂಗೀತ, ಅಭಿಷೇಕ್​ ಕಾಸರಗೋಡು ಛಾಯಾಗ್ರಹಣ ಮಾಡುತ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img