Friday, July 23, 2021
Homeಸುದ್ದಿ ಜಾಲಅಮಾವಾಸ್ಯೆ-ಹುಣ್ಣಿಮೆಗೆ ಕ್ಷೇತ್ರಕ್ಕೆ ಬರುವ ಸಂಸದರು ಸುಮಲತಾ: ಶ್ರೀಕಂಠೇಗೌಡ

ಇದೀಗ ಬಂದ ಸುದ್ದಿ

ಅಮಾವಾಸ್ಯೆ-ಹುಣ್ಣಿಮೆಗೆ ಕ್ಷೇತ್ರಕ್ಕೆ ಬರುವ ಸಂಸದರು ಸುಮಲತಾ: ಶ್ರೀಕಂಠೇಗೌಡ

ಮಂಡ್ಯ: ಅಮಾವಾಸ್ಯೆ-ಹುಣ್ಣಿಮೆಗೆ ಕ್ಷೇತ್ರಕ್ಕೆ ಬರುವ ಸಂಸದರು ಸುಮಲತಾ, ಕೋವಿಡ್​ ಸಂಕಷ್ಟದ ಸಮಯದಲ್ಲೂ ಅವರು ಕೆಲಸ ಮಾಡಲಿಲ್ಲ ಎಂದು ಜೆಡಿಎಸ್ ಎಂಎಲ್‌ಸಿ ಕೆ.ಟಿ. ಶ್ರೀಕಂಠೇಗೌಡ ವಾಗ್ದಾಳಿ ನಡೆಸಿದ್ದಾರೆ. ಸುಮಲತಾ ತಾನು 4 ತಿಂಗಳು ಬಂದಿದ್ದೆ, ನಾಲ್ಕು ದಿನ ಬಂದಿದ್ದೆ ಅಂತಾರೆ. ನಾಲ್ಕು ದಿನದಲ್ಲಿ ಇದ್ದಿದ್ದು ಒಂದೊಂದೇ ಗಂಟೆ ಎಂದು ವ್ಯಂಗ್ಯವಾಡಿದರು.

ಲೋಕಸಭಾ ಚುನಾವಣಾ ಸಮಯದಲ್ಲಿ ಗೆದ್ದರೆ ಮಂಡ್ಯದಲ್ಲೇ ಇರ್ತೀನಿ ಅಂದಿದ್ರು. ಗೆದ್ದಾಗಿನಿಂದ ಇಲ್ಲಿಯವರೆಗೆ ಎಷ್ಟು ದಿನ ಜಿಲ್ಲೆಯಲ್ಲಿ ಉಳಿದುಕೊಂಡಿದ್ದಾರೆ. ಒಂದು ರಾತ್ರಿ-ಬೆಳಗ್ಗೆಯೂ ಅವರು ಮಂಡ್ಯದಲ್ಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img