Friday, July 30, 2021
Homeಸಿನಿಮಾಇಂದು ಭಾರತಕ್ಕೆ ವಾಪಸ್ ಆಗಲಿರುವ ರಜನಿಕಾಂತ್

ಇದೀಗ ಬಂದ ಸುದ್ದಿ

ಇಂದು ಭಾರತಕ್ಕೆ ವಾಪಸ್ ಆಗಲಿರುವ ರಜನಿಕಾಂತ್

ಆರೋಗ್ಯ ತಪಾಸಣೆಗೆಂದು ಅಮೇರಿಕಕ್ಕೆ ತೆರಳಿದ್ದ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಇಂದು (ಜುಲೈ 8) ಭಾರತಕ್ಕೆ ವಾಪಾಸಾಗಲಿದ್ದಾರೆ. ಮೂತ್ರಪಿಂಡ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ತಲೈವಾ ವಿಶೇಷ ವಿಮಾನದಲ್ಲಿ ಇಂದು ಚೆನ್ನೈಗೆ ಆಗಮಿಸುತ್ತಾರೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ರಜನಿಕಾಂತ್ ಆರೋಗ್ಯ ತಪಾಸಣೆಗೆಂದು ಅಮೆರಿಕಾಗೆ ತೆರಳಿದ್ದರು. ಅಲ್ಲಿ ಧೀರ್ಘಕಾಲದ ತಪಾಸಣೆ ಮತ್ತು ವಿಶ್ರಾಂತಿ ಬಳಿಕ ಅವರು ಭಾರತಕ್ಕೆ ಬರುತ್ತಿದ್ದಾರೆ.

ರಜನಿಕಾಂತ್ ಜೂನ್ 19 ರಂದು ಅಮೆರಿಕಕ್ಕೆ ಹೋಗಿದ್ದರು. ವಿದೇಶಕ್ಕೆ ಹೊರಟಿದ್ದ ರಜನಿಕಾಂತ್ ಚೆನ್ನೈ ವಿಮಾನ ನಿಲ್ದಾಣದಲ್ಲಿ ತನ್ನ ಪತ್ನಿ ಲತಾ ಜೊತೆ ಕಾಣಿಸಿಕೊಂಡಿದ್ದರು. ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಸೂಪರ್ ಸ್ಟಾರ್​ನ ಕೆಲವು ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img