Thursday, July 29, 2021
Homeಸುದ್ದಿ ಜಾಲ'SSLC ವಿದ್ಯಾರ್ಥಿ'ಗಳೇ ಗಮನಿಸಿ

ಇದೀಗ ಬಂದ ಸುದ್ದಿ

‘SSLC ವಿದ್ಯಾರ್ಥಿ’ಗಳೇ ಗಮನಿಸಿ

ಬೆಂಗಳೂರು : 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಮತ್ತು ಹೊಸ ಮಾದರಿಯ ಪರೀಕ್ಷೆ ಕುರಿತು ಮಾರ್ಗದರ್ಶನ ನೀಡುವ ಕುರಿತು ‘ಬನ್ನಿ ವಿದ್ಯಾರ್ಥಿಗಳೇ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಆತ್ಮಸ್ಥೈರ್ಯದಿಂದ ಬರೆಯೋಣ’- ಎಂಬ ಧ್ಯೇಯವಾಖ್ಯದೊಂದಿಗೆ ಮಕ್ಕಳೊಂದಿಗೆ ಸಂವಾದ ನಡೆಸುವಂತ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು ಬನಶಂಕರಿಯ ಡಿ ಎಸ್ ಇ ಆರ್ ಟಿ ಯಲ್ಲಿ ದಿನಾಂಕ 09-07-2021ರಂದು ಬೆ.11ರಿಂದ ಅಪರಾಹ್ನ 1.30 ರವರೆಗೆ ಈ ಕಾರ್ಯಕ್ರಮವನ್ನು ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಶ್ರೀ ಎಸ್. ಸುರೇಶ್ ಕುಮಾರ್ ನಡೆಸಿಕೊಡಲಿದ್ದಾರೆ.

ರಾಜ್ಯದ ವಿವಿಧೆಡೆಯ 10ನೇ ತರಗತಿ ಪರೀಕ್ಷಾರ್ಥಿಗಳು ಆಯಾ ಜಿಲ್ಲೆಗಳ ಡಯಟ್ ಮತ್ತು ಡಿಡಿಪಿಐ ಕಚೇರಿಗಳಿಂದ ಮಾನ್ಯ ಸಚಿವರೊಂದಿಗೆ ವಿಡಿಯೋ ಸಂವಾದದಲ್ಲಿ ಭಾಗಿಯಾಗಲಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img