Sunday, August 1, 2021
Homeಸುದ್ದಿ ಜಾಲಕೆಆರ್​ಎಸ್​ನಲ್ಲಿ ಯಾವುದೇ ಬಿರುಕಿಲ್ಲ: ಮುರುಗೇಶ್​​ ನಿರಾಣಿ

ಇದೀಗ ಬಂದ ಸುದ್ದಿ

ಕೆಆರ್​ಎಸ್​ನಲ್ಲಿ ಯಾವುದೇ ಬಿರುಕಿಲ್ಲ: ಮುರುಗೇಶ್​​ ನಿರಾಣಿ

ವಿಜಯಪುರ: ಕೆಆರ್​​ಎಸ್​​ ಡ್ಯಾಂನಲ್ಲಿ ಯಾವುದೇ ಬಿರುಕಿಲ್ಲ ಎಂದು ಗಣಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದರು. ಜಿಲ್ಲೆಯ ಕೊಲ್ಹಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಬೇಬಿ ಬೆಟ್ಟಕ್ಕೆ ನಾನು ಭೇಟಿ ನೀಡಿದ್ದೇನೆ. ವೈಜ್ಞಾನಿಕವಾಗಿ ಪರೀಕ್ಷೆ ಆಗುವವರೆಗೂ ಯಾವುದೇ ಗಣಿಗಾರಿಕೆ ನಡೆಸಬಾರದು ಎಂದು ಸೂಚಿಸಲಾಗಿದೆ ಎಂದರು.

ಕಳೆದ 4 ತಿಂಗಳಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಯುತ್ತಿಲ್ಲ. ಈ ಸಂಬಂಧ ಕೆಆರ್​​​ಎಸ್ ಮುಖ್ಯ ಇಂಜಿನಿಯರ್ ಜೊತೆ ಸಹ ಮಾತನಾಡಿದ್ದೇನೆ. ಕೆಆರ್​​ಎಸ್ ಸುತ್ತಮುತ್ತ 10 ಕಿಮೀ ಗಣಿಗಾರಿಕೆ ಬಂದ್ ಮಾಡಲಾಗಿದೆ. ಬಿರುಕು ಬಿಟ್ಟಿರುವುದು ಕೇವಲ ಊಹಾಪೋಹಗಳಷ್ಟೇ. ರೈತರು ಇದಕ್ಕೆಲ್ಲ ಕಿವಿಕೊಡಬೇಡಿ ಎಂದು ಮನವಿ‌ ಮಾಡಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img