Sunday, August 1, 2021
Homeಕ್ರಿಕೆಟ್ಕ್ರೀಡೆಮಹಾರಾಷ್ಟ್ರ ಕ್ರಿಕೆಟಿಗನಿಗೆ ಕನ್ನಡ ಮೇಷ್ಟ್ರಾದ ಕೆ.ಗೌತಮ್‌

ಇದೀಗ ಬಂದ ಸುದ್ದಿ

ಮಹಾರಾಷ್ಟ್ರ ಕ್ರಿಕೆಟಿಗನಿಗೆ ಕನ್ನಡ ಮೇಷ್ಟ್ರಾದ ಕೆ.ಗೌತಮ್‌

ಕೊಲಂಬೊ(ಶ್ರೀಲಂಕಾ): ಆತಿಥೇಯ ಶ್ರೀಲಂಕಾ ವಿರುದ್ಧ ನಿಗದಿತ ಓವರ್​ಗಳ ಕ್ರಿಕೆಟ್​ ಸರಣಿಯಲ್ಲಿ ಭಾಗಿಯಾಗಲು ಯಂಗ್ ಇಂಡಿಯಾ ಲಂಕಾ ಪ್ರವಾಸದಲ್ಲಿದೆ. ಜುಲೈ 13ರಿಂದ ಉಭಯ ತಂಡಗಳ ನಡುವಿನ ಕ್ರಿಕೆಟ್​ ಸರಣಿ ಆರಂಭಗೊಳ್ಳಲಿದೆ.

ಈಗಾಗಲೇ ತರಬೇತಿ ಆರಂಭಿಸಿರುವ ಟೀಂ ಇಂಡಿಯಾ ಸಮಯ ಸಿಕ್ಕ ಸಂದರ್ಭಗಳಲ್ಲಿ ಮೋಜಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಟೀಂ ಇಂಡಿಯಾ ಆಲ್​ರೌಂಡರ್​ ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್​ ಹಾಗೂ ಮಹಾರಾಷ್ಟ್ರದ ಬ್ಯಾಟ್ಸ್‌ಮನ್​ ಋತುರಾಜ್​ ಗಾಯಕ್ವಾಡ್​ “Language Exchange” ಸೆಷನ್​​ನಲ್ಲಿ ಭಾಗಿಯಾಗಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿ ಖುದ್ದಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ವೇಳೆ ಕೃಷ್ಣಪ್ಪ ಗೌತಮ್​ ಸಹ ಆಟಗಾರ ಗಾಯಕ್ವಾಡ್​ಗೆ ಕನ್ನಡದ ಪಾಠ ಮಾಡಿದ್ದಾರೆ. ಕಾರ್ಯಕ್ರಮದ ವೇಳೆ ಕೆಲವೊಂದು ಕನ್ನಡ ಪದಗಳ ಬಗ್ಗೆ ಹೇಳಿಕೊಟ್ಟಿದ್ದು, ಇದು ಕನ್ನಡ್ ಅಲ್ಲ ಕನ್ನಡ(Kannad Alla Kannada) ಎಂದು ತಿಳಿಸಿದ್ದಾರೆ. ಇದೇ ವೇಳೆ ಗಾಯಕ್ವಾಡ ಕೂಡ ಕೆಲವೊಂದು ಮರಾಠಿ ಶಬ್ದಗಳ ಬಗ್ಗೆ ಮಾಹಿತಿ ನೀಡಿದರು.

ಭಾರತೀಯ ಕ್ರಿಕೆಟ್​ ಮಂಡಳಿ ಈ ವಿಡಿಯೋ ಶೇರ್​ ಮಾಡ್ತಿದ್ದಂತೆ ಅನೇಕರು ಇದರ ವೀಕ್ಷಣೆ ಮಾಡಿದ್ದು, ಸಾವಿರಾರು ಜನರು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದ ಮೂಲಕ ಬಿಸಿಸಿಐ ವಿವಿಧ ಭಾಷೆಗಳ ಬಗ್ಗೆ ಗೊತ್ತು ಮಾಡಿಕೊಡುವ ಕೆಲಸ ಸಹ ಮಾಡಿದ್ದು, ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img