Friday, July 30, 2021
Homeಸುದ್ದಿ ಜಾಲಟ್ವಿಟರ್ ಗೆ ಐಟಿ ಸಚಿವರ ಎಚ್ಚರಿಕೆ

ಇದೀಗ ಬಂದ ಸುದ್ದಿ

ಟ್ವಿಟರ್ ಗೆ ಐಟಿ ಸಚಿವರ ಎಚ್ಚರಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೂತನ ಸಂಪುಟದಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆಯ ನೂತನ ಸಚಿವರಾಗಿ ಅಶ್ವಿನಿ ವೈಷ್ಣವ್​ ಅಧಿಕಾರ ವಹಿಸಿಕೊಂಡಿದ್ದು, ಟ್ವಿಟರ್​ಗೆ ಖಡಕ್​ ಸಂದೇಶ ರವಾನಿಸಿದರು.

ಕಳೆದ ಕೆಲವು ತಿಂಗಳಿಂದ ಟ್ವಿಟರ್​ ಹಾಗೂ ಕೇಂದ್ರ ಸರ್ಕಾರದ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಭಾರತದ ಕಾನೂನು ಪಾಲನೆ ಮಾಡುವ ವಿಚಾರದಲ್ಲಿ ಟ್ವಿಟರ್ ಮೀನಮೇಷ ಎಣಿಸುತ್ತಿದೆ. ಇದೇ ವಿಚಾರವಾಗಿ ಮಾತನಾಡಿರುವ ನೂತನ ಐಟಿ ಸಚಿವರು, ಇಲ್ಲಿನ ಕಾನೂನು ಸರ್ವೋಚ್ಛ. ಪಾಲನೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದ್ದಾರೆ.

ಈ ಹಿಂದೆ ಐಟಿ ಸಚಿವರಾಗಿದ್ದ ರವಿಶಂಕರ್​ ಪ್ರಸಾದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ನೂತನ ಸಚಿವರಾಗಿ ಅಶ್ವಿನಿ ವೈಷ್ಣವ್​ ಅವರನ್ನು ನೇಮಕ ಮಾಡಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img