Friday, July 23, 2021
Homeಜಿಲ್ಲೆಮಂಡ್ಯರೈತರ ನೆರವಿಗೆ ಧಾವಿಸಿದ ಎಚ್​ಡಿಕೆ

ಇದೀಗ ಬಂದ ಸುದ್ದಿ

ರೈತರ ನೆರವಿಗೆ ಧಾವಿಸಿದ ಎಚ್​ಡಿಕೆ

ಮಂಡ್ಯ: ಮಳೆಯಿಂದ ಕೆರೆ ಕೋಡಿ ಬಿದ್ದು ಭತ್ತದ ಬೆಳೆ ಹಾಳಾಗಿ ಸಂಕಷ್ಟಕ್ಕೆ ಸಿಲುಕಿದ್ದ ರೈತನ ನೆರವಿಗೆ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರು ಧಾವಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೊಪ್ಪ ಸಮುದ್ರ ಗ್ರಾಮದ ಗೌರಿಶಂಕರ್ ಎಂಬ ರೈತನ 1.5 ಎಕರೆಯಷ್ಟು ಭತ್ತದ ಬೆಳೆ ನಷ್ಟವಾಗಿತ್ತು. ಇದಾದ ಬಳಿಕ ಬೆಳೆ ನಾಶದ ಕುರಿತು ರೈತ ಗೌರಿಶಂಕರ್​ ಫೇಸ್​ಬುಕ್​ನಲ್ಲಿ ವಿಡಿಯೋ ಮೂಲಕ ಪರಿಹಾರಕ್ಕಾಗಿ ಮನವಿ ಮಾಡಿಕೊಂಡಿದ್ದ.

ರೈತನ ವಿಡಿಯೋ ಗಮನಿಸಿದ ಮಾಜಿ ಸಿಎಂ ಎಚ್​​ಡಿಕೆ ಇಂದು ಬೊಪ್ಪ ಸಮುದ್ರ ಗ್ರಾಮಕ್ಕೆ ಭೇಟಿ ಕೊಟ್ಟು ರೈತ ಗೌರಿಶಂಕರ್ ಸೇರಿದಂತೆ ನಷ್ಟಕ್ಕೊಳಗಾಗಿದ್ದ ಮೂವರು ರೈತರಿಗೆ ತಲಾ 55 ಸಾವಿರ ರೂ. ಪರಿಹಾರ ನೀಡಿದ್ದಾರೆ. ಪರಿಹಾರ ನೀಡಿದ ಎಚ್ಡಿಕೆಗೆ ರೈತರು ಧನ್ಯವಾದ ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img