Friday, July 30, 2021
Homeಸಿನಿಮಾಸಲ್ಮಾನ್‌ ಖಾನ್‌ ವಿರುದ್ಧ ಎಫ್‌ಐಆರ್‌

ಇದೀಗ ಬಂದ ಸುದ್ದಿ

ಸಲ್ಮಾನ್‌ ಖಾನ್‌ ವಿರುದ್ಧ ಎಫ್‌ಐಆರ್‌

ಚಂಡೀಗಢ: ಬೀಯಿಂಗ್‌ ಹ್ಯೂಮನ್‌ ಕಂಪನಿಯಲ್ಲಿನ ಅವ್ಯವಹಾರ ಸಂಬಂಧ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌, ಸಹೋದರಿ ಅಲ್ವಿರಾ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಚಂಡೀಗಢದ ಮಣಿಮಾಜ್ರಾ ಮೂಲದ ಉದ್ಯಮಿ ಅರುಣ್‌ ಗುಪ್ತಾ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಕೇಸ್‌ ದಾಖಲಿಸಿಕೊಳ್ಳಲಾಗಿದೆ. ಅರುಣ್‌ ಗುಪ್ತಾ ಎಂಬುವರು ಶೋ ರೂಂ ತೆರೆದು ಬೀಯಿಂಗ್‌ ಹ್ಯೂಮನ್‌ ಬ್ರಾಂಡ್‌ನ ವಸ್ತ್ರಗಳಿಗಾಗಿ 3 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ದೆಹಲಿಯಿಂದ ವಸ್ತುಗಳನ್ನು ಕಳುಹಿಸಿಕೊಟ್ಟಿಲ್ಲ. ಕಂಪನಿಯ ವೆಬ್‌ಸೈಟ್‌ ಕೂಡ ಸರಿಯಾಗಿ ನಿರ್ವಹಿಸುತ್ತಿಲ್ಲ. ಸಲ್ಮಾನ್‌ ಖಾನ್‌ ಅವರ ಬೀಯಿಂಗ್‌ ಹ್ಯೂಮನ್‌ ಸಂಸ್ಥೆ ಕೋಟಿ ಕೋಟಿ ಹಣ ವಂಚಿಸಿದೆ ಎಂದು ಗುಪ್ತಾ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img