Friday, July 23, 2021
Homeಜಿಲ್ಲೆಮಂಡ್ಯಮುಂದುವರಿದ ಗಣಿ ವಿವಾದ: ಸಂಸದೆ ಸುಮಲತಾ ಭೇಟಿ

ಇದೀಗ ಬಂದ ಸುದ್ದಿ

ಮುಂದುವರಿದ ಗಣಿ ವಿವಾದ: ಸಂಸದೆ ಸುಮಲತಾ ಭೇಟಿ

ಮಂಡ್ಯ : ಶ್ರೀರಂಗಪಟ್ಟಣ ತಾಲೂಕಿನ ಚನ್ನನಕೆರೆ ಹಾಗೂ ಹಂಗರಹಳ್ಳಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಗಳಿಗೆ ಸಂಸದೆ ಸುಮಲತಾ ಅಂಬರೀಶ್ ಪೊಲೀಸ್‌ ಬಿಗಿ ಭದ್ರತೆಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಗಳಿಗೆ ಭೇಟಿ ನೀಡಿದ ಸುಮಲತಾ ಅಂಬರೀಶ್, ಸುತ್ತಲಿನ ನಿವಾಸಿಗಳ ಅಹವಾಲುಗಳನ್ನು ಆಲಿಸಿದರು.

ಹಂಗರಹಳ್ಳಿ ವ್ಯಾಪ್ತಿಯ ಗಣಿ ಸ್ಥಳಗಳಲ್ಲಿ ರಾತ್ರಿ ವೇಳೆ ಬ್ಲಾಸ್ಟಿಂಗ್ ನಡೆಸಲಾಗುತ್ತಿದೆ, ಮನೆಗಳು ಬಿರುಕುಬಿಟ್ಟಿವೆ. ಎರಡು ವರ್ಷಗಳಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಯಾರೂ ತಡೆಯುತ್ತಿಲ್ಲ ಎಂದು ಗ್ರಾಮಸ್ಥರು ಸಂಸದರ ಎದುರು ಅಳಲು ತೋಡಿಕೊಂಡರು.

ಹಂಗರಹಳ್ಳಿ ಬಳಿಕ, ಶ್ರೀರಂಗಪಟ್ಟಣ ತಾಲೂಕಿನ ಜನಪ್ರತಿನಿಧಿಗಳು ಮತ್ತು ಅವರ ಬೆಂಬಲಿಗರೇ ನಡೆಸುತ್ತಿರುವ ಚೆನ್ನನಕೆರೆ ಗ್ರಾಮದ ಕಲ್ಲು ಗಣಿ ಪ್ರದೇಶಕ್ಕೆ ಭೇಟಿ ನೀಡಿದರು. ಗಣಿ ಚಟುವಟಿಕೆಯಿಂದ ಸ್ಥಳೀಯರು ಹಿಂಸೆ ಅನುಭವಿಸುತ್ತಿದ್ದಾರೆ. ಹಾಗಾಗಿ, ಅಧಿಕಾರಿಗಳು ಅಕ್ರಮವಾಗಿ ನಡೆಯುತ್ತಿರುವ ಗಣಿ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಗಣಿ ಮಾಲೀಕರಿಗೆ ದಂಡ ವಿಧಿಸಿ, ನಷ್ಟ ಭರಿಸಿಕೊಳ್ಳಬೇಕು ಎಂದು ಇದೇ ವೇಳೆ ಅಧಿಕಾರಿಗಳಿಗೆ ಸೂಚಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img