Sunday, August 1, 2021
Homeಸಿನಿಮಾಕಿರುತೆರೆಗೆ ಮರಳಿದ ಚಂದನ್!

ಇದೀಗ ಬಂದ ಸುದ್ದಿ

ಕಿರುತೆರೆಗೆ ಮರಳಿದ ಚಂದನ್!

ನಟ ಚಂದನ್ ಕುಮಾರ್ ಮುಂದಿನ ‘ಮರಳಿ ಮನಸ್ಸಾಗಿದೆ’ ಎಂಬ ಧಾರಾವಾಹಿಯಲ್ಲಿ ಪೊಲೀಸ್ ಆಫೀಸರ್ ಆಗಿ ನಟಿಸುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದ್ದು, ದಿವ್ಯಾ ವಗುಕರ್ ಹಾಗೂ ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಈ ಧಾರಾವಾಹಿ ಹಿಂದಿಯ ‘ಘುಮ್ ಹೈ ಕಿಸೀಕೆ ಪ್ಯಾರ್ ಮೈ’ ಧಾರಾವಾಹಿಯ ರಿಮೇಕ್ ಆಗಿದೆ.

ಈ ಬಗ್ಗೆ ಮಾತನಾಡಿರುವ ಚಂದನ್ “ಈ ವರ್ಷದ ಆರಂಭದಲ್ಲಿ ನಾನು ಒಪ್ಪಿಕೊಂಡಿರುವ ಮೊದಲ ಧಾರಾವಾಹಿ ಇದು. ತುಂಬಾ ಉತ್ಸುಕನಾಗಿದ್ದೇನೆ. ನಾನು ಇಲ್ಲಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೇನೆ. ಇದರಲ್ಲಿ ಪ್ರೇಮಕಥೆಯು ಇದ್ದು, ಕಥೆ ಕುತೂಹಲ ಮೂಡಿಸುತ್ತದೆ” ಎಂದಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img