Sunday, August 1, 2021
Homeಸುದ್ದಿ ಜಾಲಮೋದಿ ಸಂಪುಟದಿಂದ ಮತ್ತಿಬ್ಬರು ಸಚಿವರು ಔಟ್‌

ಇದೀಗ ಬಂದ ಸುದ್ದಿ

ಮೋದಿ ಸಂಪುಟದಿಂದ ಮತ್ತಿಬ್ಬರು ಸಚಿವರು ಔಟ್‌

ನವದೆಹಲಿ : ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಮತ್ತು ರವಿಶಂಕರ್ ಪ್ರಸಾದ್ ಅವ್ರು ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಮುನ್ನ ರಾಜೀನಾಮೆ ನೀಡಿದ್ದಾರೆ. ಪ್ರಕಾಶ್ ಜಾವಡೇಕರ್, ಮಾಹಿತಿ ಮತ್ತು ಪ್ರಸಾರ ಸಚಿವರ ಜೊತೆಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವನ್ನ ನಿರ್ವಹಿಸುತ್ತಿದ್ದರು. ಇನ್ನು ರವಿಶಂಕರ್ ಪ್ರಸಾದ್ ಅವ್ರಿಗೆ ಕಾನೂನು ಮತ್ತು ಐಟಿ ಸಚಿವಾಲಯದ ಜವಾಬ್ದಾರಿಯೂ ಇತ್ತು. ಈ ಇಬ್ಬರು ಮಂತ್ರಿಗಳ ರಾಜೀನಾಮೆಯ ನಂತ್ರ ಈಗ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ ಸಚಿವರ ಸಂಖ್ಯೆ 12ಕ್ಕೆ ಏರಿದೆ.

ರಾಜೀನಾಮೆ ನೀಡಿದ ಸಚಿವರು ಪೂರ್ಣ ಪಟ್ಟಿ ಇಲ್ಲಿದೆ..! ಪ್ರಕಾಶ್ ಜಾವಡೇಕರ್, ರವಿಶಂಕರ್ ಪ್ರಸಾದ್, ಡಿ.ವಿ.ಸದಾನಂದ ಗೌಡ, ತವರ್‌ಚಂದ್ ಗೆಹ್ಲೋಟ್, ರಮೇಶ್ ಪೋಖ್ರಿಯಾಲ್ ನಿಶಾಂಕ್, ಡಾ.ಹರ್ಷ್ ವರ್ಧನ್, ಸಂತೋಷ್ ಕುಮಾರ್ ಗಂಗ್ವಾರ್ ಅವರು ಕರ್ನಾಟಕ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಲ್ಲದೆ ಸಂಜಯ್ ಧೋತ್ರೆ, ರಟ್ಟನ್ ಲಾಲ್ ಕಟಾರಿಯಾ, ಪ್ರತಾಪ್ ಚಂದ್ರ ಸಾರಂಗಿ ಮತ್ತು ದೇಬಶ್ರೀ ಚೌಧರಿ ಕೂಡ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img