Sunday, August 1, 2021
Homeಸಿನಿಮಾನಟ ರಿಷಬ್​ ಶೆಟ್ಟಿ ಅವರಿಗೆ ಇಂದು ಜನ್ಮದಿನದ ಸಂಭ್ರಮ

ಇದೀಗ ಬಂದ ಸುದ್ದಿ

ನಟ ರಿಷಬ್​ ಶೆಟ್ಟಿ ಅವರಿಗೆ ಇಂದು ಜನ್ಮದಿನದ ಸಂಭ್ರಮ

ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಯಶಸ್ಸು ಕಂಡ ರಿಷಬ್​ ಶೆಟ್ಟಿ ಅವರಿಗೆ ಇಂದು (ಜು.7) ಜನ್ಮದಿನದ ಸಂಭ್ರಮ. ಹಲವು ವರ್ಷಗಳಿಂದ ಚಂದನವನದಲ್ಲಿ ತೊಡಗಿಕೊಂಡಿರುವ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಇಂದು ಎಲ್ಲರೂ ರಿಷಬ್​ ಶೆಟ್ಟಿಗೆ ಹುಟ್ಟುಹಬ್ಬದ ಶುಭ ಹಾರೈಸುತ್ತಿದ್ದಾರೆ. ಅವರ ಜೊತೆ ಹಲವು ವರ್ಷಗಳಿಂದ ಒಡನಾಟ ಹೊಂದಿರುವ ರಕ್ಷಿತ್​ ಶೆಟ್ಟಿ ಕೂಡ ತುಂಬಾ ಆತ್ಮೀಯತೆಯಿಂದ ವಿಶ್​ ಮಾಡಿದ್ದಾರೆ. ಬಣ್ಣದ ಲೋಕದಲ್ಲಿ ಅನೇಕ ಸೋಲು-ಗೆಲುವುಗಳನ್ನು ಜೊತೆಯಾಗಿ ಕಂಡವರು ಈ ಗೆಳೆಯರು.

‘ನಿನ್ನ ಜೊತೆಗಿನ ಈ ಸಂತಸದ ಪಯಣವು ಪ್ರೀತಿ, ನಗು, ಕಲಿಕೆಯಿಂದ ತುಂಬಿದೆ. ಹುಟ್ಟುಹಬ್ಬದ ಶುಭಾಶಯಗಳು ಮಗಾ. ನಿನ್ನ ಬದುಕು ಯಾವಾಗಲೂ ಖುಷಿಯಾಗಿರಲಿ ಮತ್ತು ಅದ್ಭುತವಾಗಿರಲಿ ಎಂದು ಹಾರೈಸುತ್ತೇನೆ’ ಎಂದು ರಕ್ಷಿತ್​ ಶೆಟ್ಟಿ ಟ್ವೀಟ್​ ಮಾಡಿದ್ದಾರೆ. ‘ಧನ್ಯವಾದಗಳು ಮಗಾ’ ಎಂದು ರಿಷಬ್​ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ರಕ್ಷಿತ್​ ಶೆಟ್ಟಿ ಒಡೆತನದ ಪರಮ್​ವಾ ಸ್ಟುಡಿಯೋಸ್​ ಮೂಲಕವೂ ರಿಷಬ್​ಗೆ ಶುಭಕೋರಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img