Friday, July 23, 2021
Homeಸುದ್ದಿ ಜಾಲರಷ್ಯಾದ ಪೂರ್ವ ಕರಾವಳಿ ತೀರ ಪ್ರದೇಶದಲ್ಲಿ ವಿಮಾನ ಪತನ

ಇದೀಗ ಬಂದ ಸುದ್ದಿ

ರಷ್ಯಾದ ಪೂರ್ವ ಕರಾವಳಿ ತೀರ ಪ್ರದೇಶದಲ್ಲಿ ವಿಮಾನ ಪತನ

ಮಾಸ್ಕೊ: ರಷ್ಯಾದ ಪೂರ್ವ ಕರಾವಳಿ ತೀರ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದ್ದ ಆಂಟೊನೊವ್ ಎಎನ್‌ -26 ವಿಮಾನದಲ್ಲಿದ್ದ 19 ಪ್ರಯಾಣಿಕರು ಮತ್ತು ಸಿಬ್ಬಂದಿಯ ಮೃತದೇಹಗಳು ಬುಧವಾರ ಪತ್ತೆಯಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 28 ಜನರಿದ್ದ ವಿಮಾನವು ಮಂಗಳವಾರ ಪಲಾನಾಕ್ಕೆ ತೆರಳುತ್ತಿದ್ದ ಮಾರ್ಗಮಧ್ಯೆದಲ್ಲೇ ಕೆಟ್ಟ ಹವಾಮಾನದ ಕಾರಣ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿತ್ತು.

ವಿಮಾನದಲ್ಲಿನ ಸಿಬ್ಬಂದಿ ಮತ್ತು ಪ್ರಯಾಣಿಕರಲ್ಲಿ ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆ ಇಲ್ಲ. ಸಾವಿಗೀಡಾದವರಲ್ಲಿ ಪಲಾನಾದ ಸ್ಥಳೀಯ ಸರ್ಕಾರದ ಮುಖ್ಯಸ್ಥ ಓಲ್ಗಾ ಮೊಖಿರೇವಾ ಅವರೂ ಇದ್ದಾರೆ ಎಂದು ಕಮ್ಚಟ್ಕಾ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ರಷ್ಯಾದ ಪೂರ್ವ ಕರಾವಳಿಯ ಬಂಡೆಗಳ ಪ್ರದೇಶದಲ್ಲಿ ವಿಮಾನವ ಭಗ್ನಾವೇಷಗಳು ಮಂಗಳವಾರ ಸಂಜೆ ಪತ್ತೆಯಾಗಿವೆ. ಅಪಘಾತಕ್ಕೀಡಾದ ಸ್ಥಳದಲ್ಲಿ ಕತ್ತಲೆ ಇದ್ದುದ್ದರಿಂದ ರಾತ್ರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಬುಧವಾರ ಬೆಳಿಗ್ಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img